ಭಾನುವಾರ, ಜನವರಿ 17, 2010

ನಿಮ್ಮ ವಿಜ್ಞಾನ-ಬುದ್ದಿಗೋಂದು ಸವಾಲು

ಗ್ರಹಣ  ಮುಗಿದ ಎರಡು ದಿನದ ಮೇಲೆ ನನಗೊಂದು ಸವಾಲಾದ ಪ್ರಶ್ನೆ

ಸೂರ್ಯಗ್ರಹಣದ ಸಮಯವನ್ನು ತಿಳಿಯಲು  ನಮ್ಮ ಹಿರಿಯರು ,ಪ್ರಾಚೀನರು ಬಳಸುತ್ತಿದ್ದ ವಿಧಾನ

ಒಂದು ತಟ್ಟೆಯಲ್ಲಿ ನೀರು ತುಂಬಿ ಅದರ ನಡುವೆ "ಒನಕೆ"ಯನ್ನು ಲಂಬವಾಗಿ ನಿಲ್ಲಿಸಿದರೆ ಅದು ಗ್ರಹಣಹಿಡಿದಿರುವ ಸಮಯವನ್ನು ಬಿಟ್ಟು ಬೇರೆ ಯಾವಾಗಲೂ ಲಂಬವಾಗಿ ನಿಲ್ಲುವುದಿಲ್ಲವಂತೆ??????
ಅಷ್ಟು ಮಾತ್ರವಲ್ಲ ಗ್ರಹಣ ಮುಗಿದ ತತ್ ಕ್ಷಣವೇ ತಾನಾಗಿಯೇ ಬಿದ್ದು ಬಿಡುತ್ತದೆ ಅಂತೆ
ನಿನ್ನೆ ದಿನಪತ್ರಿಕೆಯಲ್ಲಿ ಓದಿದಾಗ(ಸಂಯುಕ್ತ ಕರ್ನಾಟಕ-೧೬ ಜನವರಿ ೨೦೧೦)ನೆನಪಿಗೆ ಬಂತು
ಗೂಗಲ್ ನಲ್ಲಿ ಬೇಕಾದರೆ ಕನ್ನಡ ಅಕ್ಷರಗಳಲ್ಲಿ"ಸೂರ್ಯಗ್ರಹಣ ಒನಕೆ" ಎಂದು ಟೈಪ್ ಮಾಡಿ ಸಿಗುತ್ತದೆ

ನಮ್ಮ ಹಿರಿಯರೂ ಇದೇ ವಿಧಾನದಿಂದ ಗ್ರಹಣದ ಸಮಯ ತಿಳಿಯಲು ಬಳಸುತ್ತಿದ್ದ ಬಗ್ಗೆ ಕೇಳಿದ್ದೇನೆ
ಆದರೆ ಸರಿಯಾಗಿ ಗೊತ್ತಿರಲಿಲ್ಲ 
ನನಗ್ಯಾಕೋ ಇದು ಮೂಢನಂಬಿಕೆ,ಮೌಢ್ಯ ಅನ್ನ್ನಿಸುತ್ತಿಲ್ಲ ಬದಲಾಗಿ ನಮ್ಮ ಹಿರಿಯರು ಎಷ್ಟು ಬುದ್ದಿವಂತರು ಅಲ್ವಾ ಎನ್ನಿಸಿತು
ಅದಕ್ಕೆ ವೈಜ್ಞಾನಿಕ ಕಾರಣ ಹೀಗಿರಬಹುದು

1)ನೀರಿನಲ್ಲಿ ಸೂರ್ಯ-ಚಂದ್ರರ  ಸ್ಥಾನ-ಚಲನೆಗನುಸಾರವಾಗಿ ಉಬ್ಬರ-ಇಳಿತಗಳಾಗುವುದು ನಮಗೆ ಗೊತ್ತೇ ಇದೆ ಆ ಉಬ್ಬರ-ಇಳಿತ ಕಾರಣವಿರಬಹುದು
ಬೊರಲು ಪಾದವಿರುವ ಒನಕೆ(ಒನಕೆಯ ಆಕಾರವನ್ನೋಮ್ಮೆ ಗಮನಿಸಿ)ಆ ಉಬ್ಬರ-ಇಳಿತದ ವೈತ್ಯಾಸದಿಂದ ಒನಕೆ ಬೀಳಬಹುದಲ್ಲವೇ

2)ಇಷ್ಟು ಮಾತ್ರವಲ್ಲ ಗ್ರಹಣಕಾಲದಲ್ಲಿ ಒನಕೆಯನ್ನು ಹಿಡಿದು ಎತ್ತಿದಾಗ ತಟ್ಟೆಯ ಸಮೇತ  ಮೇಲೆ ಬರುತ್ತದೆ ಅಂತೆ? ಗ್ರಹಣಕಾಲದಲ್ಲಿ ಗುರುತ್ವ ಹೆಚ್ಚಿರುತ್ತದೆ ಇರಬಹುದು. ತಟ್ಟೆ ಒನಕೆಗೆ ಹೇಗೆ ಅಂಟಿಕೋಡಿತೂ ಅಂತ ? Surface Tension ಕಾರಣವಿರಬಹುದೇ ನನಗ್ಯಾಕೋ ಇದು ಗಣಪತಿ ಹಾಲು ಕುಡಿದ ಪ್ರಸಂಗದಂತೆ ಅನ್ನಿಸುತ್ತಿಲ್ಲ ನೀವೇನಂತೀರಿ?

ಈ ವಿಧಾನವನ್ನು ನಮ್ಮ ಹಿರಿಯರು ಸಾವಿರಾರು ವರ್ಷಗಳಿಂದ ಬಳಸುತ್ತಿದ್ದಾರೆ(ನಾನೂರು ವರ್ಷದ ಹಿಂದೆ ಲಿಪ್ರೆ ಅಥವಾ ಗೇಲಿಲಿಯೊ ದೂರದರ್ಶಕ ಕಂಡು ಹಿಡಿಯೋ ಮುಂಚೆಯೇ ಈ ವಿಧಾನ ನಮ್ಮ ಹಳ್ಳಿ-ಹೈದರಿಗೆ ಗೊತ್ತಿತ್ತು)

ಈ ರೀತಿ ಎಷ್ಟು ಸಂಗತಿಗಳು ನಮ್ಮ ಅರಿವಿಗೆ ಬಾರದೆ ಮರ‍ೆತಿದ್ದೇವೋ ಗೊತ್ತಿಲ್ಲ
ಅದು ಇರಲಿ  ಇದನ್ನು ಕಂಡುಹಿಡಿದ ವಿಜ್ಞಾನಿ ಯಾರು ಇರಬಹುದು ಅವರಿಗೆ ಗುರುತ್ವ , ದ್ರವಗಳ ಸ್ವಭಾವ ಈ ಎಲ್ಲಾ ಸಂಗತಿಗಳ ಬಗ್ಗೆ ಹೇಗೆ ಗೊತ್ತಾಗಿದಿರಬಹುದು?, ಯಾವಾಗ ಪ್ರಯೋಗ ಮಾಡಿ ಕಂಡು ಹಿಡಿದಿರಬಹುದು(ಪ್ರಕೄತಿಯೇ ಅವರಿಗೆ ಲ್ಯಾಬ್)?

ಇನ್ನು ಎಷ್ಟು ಸಂಗತಿಗಳು ನಮ್ಮ ಹಿರಿಯರಿಗೆ ಗೊತ್ತಿದ್ದರೂ ನಾವೇ  ವಿಜ್ಞಾನದಲ್ಲಿ ಮುಂದುವರೆದಿದ್ದೇವೆ
ಅನ್ನುತ್ತೇವೆ ಆದರೂ ಗ್ರಹಣದ ದಿನ ಮನೆ ಬಿಟ್ಟು ಹೋರಬರದವರಿಗೆ ಏನನ್ನಬೇಕು
ಗ್ರಹಣದ ಬಗ್ಗೆ ಮಾಹಿತಿ ನೀಡದೆ ಶಾಲಾ-ಕಾಲೇಜುಗಳಿಗೆ ರಜೆ ಏಕೇ ಬೇಕು

 ನಮ್ಮ ಹಿರಿಯರು ನಿಜವಾದ ಜ್ಞಾನ ಉಳ್ಳವರಲ್ಲವೇ
ನನಗೆ ಒನಕೆ ಪ್ರಯೊಗವನ್ನು ಸ್ವತಃ ವೀಕ್ಷಿಸುವ ಅವಕಾಶ ಸಿಗಲಿಲ್ಲ 
ತಡವಾಗಿ ಇದರ ಬಗ್ಗೆ ತಿಳಿಯಿತು

ನಿಮಗೇನಾದರೂ ಗೋತ್ತಿದ್ದರೆ ನೀವೇನಾದ್ರು ನೋಡಿದ್ದರೆ ದಯವಿಟ್ಟು ತಿಳಿಸಿ
(ನಿಮ್ಮ ಬ್ಲಾಗ್ ನಲ್ಲಾಗಲಿ ಅಥವಾ ನನ್ನ ಬ್ಲಾಗ್ ಕಮೆಂಟ್ ಗಳಲ್ಲಾಗಲಿ ತಿಳಿಸಿ)
ಆದರೆ ಸಮುದ್ರ-ಸಾಗರ ಗಳಲ್ಲಿ ಏನೋ ಒಬ್ಬರ- ಇಳಿತ ಬರಬಹುದು ತಟ್ಟೆಯಲ್ಲಿನ ಅರ್ಧ ಲೀಟರ್ ಲೀರಿನಲ್ಲೂ ಉಬ್ಬರ-ಇಳಿತ ಬರುತ್ತದೆಯೇ ಬಂದರೂ ಅದು ವಸ್ತು ಒಂದನ್ನು ಬೀಳಿಸುವಷ್ಟು ಪ್ರಭಾವಶಾಲಿಯಾಗಿರುತ್ತದೆಯೇ? ಈ ರಹಸ್ಯಕ್ಕೆ ಉತ್ತರ ಸಿಗಲಿಲ್ಲ

ನಿಮ್ಮ ಹಿರಿಯರನ್ನೊ ಒಮ್ಮೆ ವಿಚಾರಿಸಿ-ಹೆಚ್ಚಿನ ಮಾಹಿತಿ ಪಡೆಯಿರಿ
ಬೇರೆ ಯಾವುದೇ ಕಾರಣಗಳು ನಿಮಗೆ ಗೊತ್ತಿದ್ದರೆ ನನ್ನ-ಬ್ಲಾಗ್ ದಯವಿಟ್ಟು ಸಂಪರ್ಕಿಸಿ

ಇದು ರೀಲ್ ಅಲ್ಲ ರಿಯಲ್ ಫ಼್ಯಾಕ್ಟ್ ,ರಿಯಲ್ ಮಿಸ್ಟರಿ?  ನಿಮ್ಮ ವಿಜ್ಞಾನ-ಬುದ್ದಿಗೋಂದು ಸವಾಲು
ಬನ್ನಿ ಮುಂದೆ ಓದಿ 

ಇವನ್ಯಾಕೆ ಗ್ರಹಣ ಮುಗಿದ ಎರಡು ದಿನದ ನಂತರ್ವೂ ತಲೆಕೇಡಿಸಿಕೋಂಡಿದ್ದಾನೆ ಅಂದುಕೋಳ್ಳಬೇಡಿ ಪ್ಲೀಸ್
ನಿಮ್ಮ ವಿಜ್ಞಾನ ಬುದ್ದಿಯನ್ನು ಚಲಾಯಿಸಿ
ನಾನು ಉತ್ತರ ಹುಡುಕಲು ಪ್ರಯತ್ನಿಸುತ್ತೇನೆ

ಏನೆ ಅನ್ನಿ  ಗ್ರಹಣ ನಿಮಿತ್ತ ನಮ್ಮ ರಾಜ್ಯದ ಹಲವು ಶಾಲಾ-ಕಾಲೇಜುಗಳಿಗೆ ರಜೆ ನೀಡಿರುವುದು ನಮ್ಮ ವೈಜ್ಞಾನಿಕ ಮನೋಭಾವದ ಕೋರತೆ ತೊರಿಸುತ್ತದೆ


ಕನ್ನಡದ ವಿಜ್ಞಾನ ಬ್ಲಾಗ್ ಗಳು ಏಕೋ ಅರ್ಧಕ್ಕೆ ನಿಂತಿರುವಂತೆ  ತೋರುತ್ತದೆ
"ಕಣಜ"ವೀಕೀಪೀಡಿಯಾ ಕೂಡ ವಿಷಯ ತುಂಬುವವರ ಕೋರತೆ ಎದುರಿಸುತ್ತಿದೆ

ದಯವಿಟ್ಟು ಕನ್ನಡದಲ್ಲಿ ವಿಜ್ಞಾನದ ವಿಷಯಗಳು ಬರುತ್ತಿರಲಿ 
(ನನ್ನ ಬ್ಲಾಗ್ ಬಗ್ಗೆ  ಕೇಳುವವರು ಇಲ್ಲದಿದ್ದರೂ ಮುಂದುವರ‍ೆಸುತ್ತಿದ್ದೇನೆ)
ವಂದನೆಗಳು

3 ಕಾಮೆಂಟ್‌ಗಳು:

ಚುಕ್ಕಿಚಿತ್ತಾರ ಹೇಳಿದರು...

ನಿಮ್ಮ ಲೇಖನಗಳು ತು೦ಬಾ ಉಪಯುಕ್ತವಾಗಿವೆ.ನೀವು ನಿಮ್ಮ ಬ್ಲಾಗಿಗೆ followers link ಇಟ್ಟರೆ ಪ್ರತೀಸಾರಿ ಹುಡುಕುವ ಕಷ್ಟ ತಪ್ಪುತ್ತದೆ..

ದರ್ಶನ ಹೇಳಿದರು...

@ಚುಕ್ಕಿಚಿತ್ತಾರ

Followers link ಪ್ರಾಯೋಗಿಕವಾಗಿರುವುದರಿಂದ "ಗ್ರಹಣ"ಬ್ಲಾಗ್ ಗೆ ಅದನ್ನು ಸೈಟ್ ಅನುಮತಿಸುತ್ತಿಲ್ಲ ಅದರ ಬದಲಾಗಿ "ಪ್ರತಿಫಲನ"ವನ್ನೇ ಹಿಂಬಾಲಿಸಬಹುದು



ಅಲ್ಲದೆ "ಗ್ರಹಣ"ದಲ್ಲಿ ಸದಾಕಾಲ ಲೇಖನಗಳು ಇರಲಾರವು(ಗ್ರಹಣದಂತಹ ಖಗೋಳ ಘಟನೆಗಳು

ಸಂಭವಿಸಿದಾಗ ಮಾತ್ರ ಇರುತ್ತವೆ ಆದರೂ ಅದನ್ನು
ಮುಂದುವರೆಸುತ್ತೇನೆ) ಅಥವಾ ಅದರ ಹೆಸರು ಬದಲಿಸಬಹುದೇ ಎಂಬ ಯೋಚನೆಯೂ ಇದೆ



ಆದರೆ "ಪ್ರತಿಫಲನ"ದಲ್ಲಿ ಸದಾ ಲೇಖನಗಳಿರುತ್ತವೆ ಅದು ಅನಂತ ವಿಶ್ವದ ಅಗಾಧ ವಿಷಯಗಳನ್ನು ಸದಾ ನಿಮ್ಮ ಮುಂದಿಡುತ್ತದೆ ನಿರೀಕ್ಷಿಸಿ

ತಮ್ಮ ಸಲಹೆಗೆ ಧನ್ಯವಾದಗಳು

Raghu ಹೇಳಿದರು...

ಈ ವಿಷಯ ಗೊತ್ತಿರಲಿಲ್ಲ.. ಒಳ್ಳೆಯ ಮಾಹಿತಿ.. ಓದಿ ಆಶ್ಚರ್ಯವಾಯಿತು..!
ನಿಮ್ಮವ,
ರಾಘು.