ಭಾನುವಾರ, ಜನವರಿ 17, 2010

ನಿಮ್ಮ ವಿಜ್ಞಾನ-ಬುದ್ದಿಗೋಂದು ಸವಾಲು

ಗ್ರಹಣ  ಮುಗಿದ ಎರಡು ದಿನದ ಮೇಲೆ ನನಗೊಂದು ಸವಾಲಾದ ಪ್ರಶ್ನೆ

ಸೂರ್ಯಗ್ರಹಣದ ಸಮಯವನ್ನು ತಿಳಿಯಲು  ನಮ್ಮ ಹಿರಿಯರು ,ಪ್ರಾಚೀನರು ಬಳಸುತ್ತಿದ್ದ ವಿಧಾನ

ಒಂದು ತಟ್ಟೆಯಲ್ಲಿ ನೀರು ತುಂಬಿ ಅದರ ನಡುವೆ "ಒನಕೆ"ಯನ್ನು ಲಂಬವಾಗಿ ನಿಲ್ಲಿಸಿದರೆ ಅದು ಗ್ರಹಣಹಿಡಿದಿರುವ ಸಮಯವನ್ನು ಬಿಟ್ಟು ಬೇರೆ ಯಾವಾಗಲೂ ಲಂಬವಾಗಿ ನಿಲ್ಲುವುದಿಲ್ಲವಂತೆ??????
ಅಷ್ಟು ಮಾತ್ರವಲ್ಲ ಗ್ರಹಣ ಮುಗಿದ ತತ್ ಕ್ಷಣವೇ ತಾನಾಗಿಯೇ ಬಿದ್ದು ಬಿಡುತ್ತದೆ ಅಂತೆ
ನಿನ್ನೆ ದಿನಪತ್ರಿಕೆಯಲ್ಲಿ ಓದಿದಾಗ(ಸಂಯುಕ್ತ ಕರ್ನಾಟಕ-೧೬ ಜನವರಿ ೨೦೧೦)ನೆನಪಿಗೆ ಬಂತು
ಗೂಗಲ್ ನಲ್ಲಿ ಬೇಕಾದರೆ ಕನ್ನಡ ಅಕ್ಷರಗಳಲ್ಲಿ"ಸೂರ್ಯಗ್ರಹಣ ಒನಕೆ" ಎಂದು ಟೈಪ್ ಮಾಡಿ ಸಿಗುತ್ತದೆ

ನಮ್ಮ ಹಿರಿಯರೂ ಇದೇ ವಿಧಾನದಿಂದ ಗ್ರಹಣದ ಸಮಯ ತಿಳಿಯಲು ಬಳಸುತ್ತಿದ್ದ ಬಗ್ಗೆ ಕೇಳಿದ್ದೇನೆ
ಆದರೆ ಸರಿಯಾಗಿ ಗೊತ್ತಿರಲಿಲ್ಲ 
ನನಗ್ಯಾಕೋ ಇದು ಮೂಢನಂಬಿಕೆ,ಮೌಢ್ಯ ಅನ್ನ್ನಿಸುತ್ತಿಲ್ಲ ಬದಲಾಗಿ ನಮ್ಮ ಹಿರಿಯರು ಎಷ್ಟು ಬುದ್ದಿವಂತರು ಅಲ್ವಾ ಎನ್ನಿಸಿತು
ಅದಕ್ಕೆ ವೈಜ್ಞಾನಿಕ ಕಾರಣ ಹೀಗಿರಬಹುದು

1)ನೀರಿನಲ್ಲಿ ಸೂರ್ಯ-ಚಂದ್ರರ  ಸ್ಥಾನ-ಚಲನೆಗನುಸಾರವಾಗಿ ಉಬ್ಬರ-ಇಳಿತಗಳಾಗುವುದು ನಮಗೆ ಗೊತ್ತೇ ಇದೆ ಆ ಉಬ್ಬರ-ಇಳಿತ ಕಾರಣವಿರಬಹುದು
ಬೊರಲು ಪಾದವಿರುವ ಒನಕೆ(ಒನಕೆಯ ಆಕಾರವನ್ನೋಮ್ಮೆ ಗಮನಿಸಿ)ಆ ಉಬ್ಬರ-ಇಳಿತದ ವೈತ್ಯಾಸದಿಂದ ಒನಕೆ ಬೀಳಬಹುದಲ್ಲವೇ

2)ಇಷ್ಟು ಮಾತ್ರವಲ್ಲ ಗ್ರಹಣಕಾಲದಲ್ಲಿ ಒನಕೆಯನ್ನು ಹಿಡಿದು ಎತ್ತಿದಾಗ ತಟ್ಟೆಯ ಸಮೇತ  ಮೇಲೆ ಬರುತ್ತದೆ ಅಂತೆ? ಗ್ರಹಣಕಾಲದಲ್ಲಿ ಗುರುತ್ವ ಹೆಚ್ಚಿರುತ್ತದೆ ಇರಬಹುದು. ತಟ್ಟೆ ಒನಕೆಗೆ ಹೇಗೆ ಅಂಟಿಕೋಡಿತೂ ಅಂತ ? Surface Tension ಕಾರಣವಿರಬಹುದೇ ನನಗ್ಯಾಕೋ ಇದು ಗಣಪತಿ ಹಾಲು ಕುಡಿದ ಪ್ರಸಂಗದಂತೆ ಅನ್ನಿಸುತ್ತಿಲ್ಲ ನೀವೇನಂತೀರಿ?

ಈ ವಿಧಾನವನ್ನು ನಮ್ಮ ಹಿರಿಯರು ಸಾವಿರಾರು ವರ್ಷಗಳಿಂದ ಬಳಸುತ್ತಿದ್ದಾರೆ(ನಾನೂರು ವರ್ಷದ ಹಿಂದೆ ಲಿಪ್ರೆ ಅಥವಾ ಗೇಲಿಲಿಯೊ ದೂರದರ್ಶಕ ಕಂಡು ಹಿಡಿಯೋ ಮುಂಚೆಯೇ ಈ ವಿಧಾನ ನಮ್ಮ ಹಳ್ಳಿ-ಹೈದರಿಗೆ ಗೊತ್ತಿತ್ತು)

ಈ ರೀತಿ ಎಷ್ಟು ಸಂಗತಿಗಳು ನಮ್ಮ ಅರಿವಿಗೆ ಬಾರದೆ ಮರ‍ೆತಿದ್ದೇವೋ ಗೊತ್ತಿಲ್ಲ
ಅದು ಇರಲಿ  ಇದನ್ನು ಕಂಡುಹಿಡಿದ ವಿಜ್ಞಾನಿ ಯಾರು ಇರಬಹುದು ಅವರಿಗೆ ಗುರುತ್ವ , ದ್ರವಗಳ ಸ್ವಭಾವ ಈ ಎಲ್ಲಾ ಸಂಗತಿಗಳ ಬಗ್ಗೆ ಹೇಗೆ ಗೊತ್ತಾಗಿದಿರಬಹುದು?, ಯಾವಾಗ ಪ್ರಯೋಗ ಮಾಡಿ ಕಂಡು ಹಿಡಿದಿರಬಹುದು(ಪ್ರಕೄತಿಯೇ ಅವರಿಗೆ ಲ್ಯಾಬ್)?

ಇನ್ನು ಎಷ್ಟು ಸಂಗತಿಗಳು ನಮ್ಮ ಹಿರಿಯರಿಗೆ ಗೊತ್ತಿದ್ದರೂ ನಾವೇ  ವಿಜ್ಞಾನದಲ್ಲಿ ಮುಂದುವರೆದಿದ್ದೇವೆ
ಅನ್ನುತ್ತೇವೆ ಆದರೂ ಗ್ರಹಣದ ದಿನ ಮನೆ ಬಿಟ್ಟು ಹೋರಬರದವರಿಗೆ ಏನನ್ನಬೇಕು
ಗ್ರಹಣದ ಬಗ್ಗೆ ಮಾಹಿತಿ ನೀಡದೆ ಶಾಲಾ-ಕಾಲೇಜುಗಳಿಗೆ ರಜೆ ಏಕೇ ಬೇಕು

 ನಮ್ಮ ಹಿರಿಯರು ನಿಜವಾದ ಜ್ಞಾನ ಉಳ್ಳವರಲ್ಲವೇ
ನನಗೆ ಒನಕೆ ಪ್ರಯೊಗವನ್ನು ಸ್ವತಃ ವೀಕ್ಷಿಸುವ ಅವಕಾಶ ಸಿಗಲಿಲ್ಲ 
ತಡವಾಗಿ ಇದರ ಬಗ್ಗೆ ತಿಳಿಯಿತು

ನಿಮಗೇನಾದರೂ ಗೋತ್ತಿದ್ದರೆ ನೀವೇನಾದ್ರು ನೋಡಿದ್ದರೆ ದಯವಿಟ್ಟು ತಿಳಿಸಿ
(ನಿಮ್ಮ ಬ್ಲಾಗ್ ನಲ್ಲಾಗಲಿ ಅಥವಾ ನನ್ನ ಬ್ಲಾಗ್ ಕಮೆಂಟ್ ಗಳಲ್ಲಾಗಲಿ ತಿಳಿಸಿ)
ಆದರೆ ಸಮುದ್ರ-ಸಾಗರ ಗಳಲ್ಲಿ ಏನೋ ಒಬ್ಬರ- ಇಳಿತ ಬರಬಹುದು ತಟ್ಟೆಯಲ್ಲಿನ ಅರ್ಧ ಲೀಟರ್ ಲೀರಿನಲ್ಲೂ ಉಬ್ಬರ-ಇಳಿತ ಬರುತ್ತದೆಯೇ ಬಂದರೂ ಅದು ವಸ್ತು ಒಂದನ್ನು ಬೀಳಿಸುವಷ್ಟು ಪ್ರಭಾವಶಾಲಿಯಾಗಿರುತ್ತದೆಯೇ? ಈ ರಹಸ್ಯಕ್ಕೆ ಉತ್ತರ ಸಿಗಲಿಲ್ಲ

ನಿಮ್ಮ ಹಿರಿಯರನ್ನೊ ಒಮ್ಮೆ ವಿಚಾರಿಸಿ-ಹೆಚ್ಚಿನ ಮಾಹಿತಿ ಪಡೆಯಿರಿ
ಬೇರೆ ಯಾವುದೇ ಕಾರಣಗಳು ನಿಮಗೆ ಗೊತ್ತಿದ್ದರೆ ನನ್ನ-ಬ್ಲಾಗ್ ದಯವಿಟ್ಟು ಸಂಪರ್ಕಿಸಿ

ಇದು ರೀಲ್ ಅಲ್ಲ ರಿಯಲ್ ಫ಼್ಯಾಕ್ಟ್ ,ರಿಯಲ್ ಮಿಸ್ಟರಿ?  ನಿಮ್ಮ ವಿಜ್ಞಾನ-ಬುದ್ದಿಗೋಂದು ಸವಾಲು
ಬನ್ನಿ ಮುಂದೆ ಓದಿ 

ಇವನ್ಯಾಕೆ ಗ್ರಹಣ ಮುಗಿದ ಎರಡು ದಿನದ ನಂತರ್ವೂ ತಲೆಕೇಡಿಸಿಕೋಂಡಿದ್ದಾನೆ ಅಂದುಕೋಳ್ಳಬೇಡಿ ಪ್ಲೀಸ್
ನಿಮ್ಮ ವಿಜ್ಞಾನ ಬುದ್ದಿಯನ್ನು ಚಲಾಯಿಸಿ
ನಾನು ಉತ್ತರ ಹುಡುಕಲು ಪ್ರಯತ್ನಿಸುತ್ತೇನೆ

ಏನೆ ಅನ್ನಿ  ಗ್ರಹಣ ನಿಮಿತ್ತ ನಮ್ಮ ರಾಜ್ಯದ ಹಲವು ಶಾಲಾ-ಕಾಲೇಜುಗಳಿಗೆ ರಜೆ ನೀಡಿರುವುದು ನಮ್ಮ ವೈಜ್ಞಾನಿಕ ಮನೋಭಾವದ ಕೋರತೆ ತೊರಿಸುತ್ತದೆ


ಕನ್ನಡದ ವಿಜ್ಞಾನ ಬ್ಲಾಗ್ ಗಳು ಏಕೋ ಅರ್ಧಕ್ಕೆ ನಿಂತಿರುವಂತೆ  ತೋರುತ್ತದೆ
"ಕಣಜ"ವೀಕೀಪೀಡಿಯಾ ಕೂಡ ವಿಷಯ ತುಂಬುವವರ ಕೋರತೆ ಎದುರಿಸುತ್ತಿದೆ

ದಯವಿಟ್ಟು ಕನ್ನಡದಲ್ಲಿ ವಿಜ್ಞಾನದ ವಿಷಯಗಳು ಬರುತ್ತಿರಲಿ 
(ನನ್ನ ಬ್ಲಾಗ್ ಬಗ್ಗೆ  ಕೇಳುವವರು ಇಲ್ಲದಿದ್ದರೂ ಮುಂದುವರ‍ೆಸುತ್ತಿದ್ದೇನೆ)
ವಂದನೆಗಳು

ಗ್ರಹಣ ,ದೇಶಾದ್ಯಂತ ಅಘೋಶಿತ ಕರ್ಫ್ಯೂ,ರಾಜ್ಯದ ಬಹುತೇಕ ಶಾಲಾ-ಕಾಲೇಜುಗಳಿಗೆ ರಜೆ

ನಿನ್ನೆ ತರಕಾರಿ ಕೋಳ್ಳಲು ನಮ್ಮಮ್ಮ ಪೇಟೆಗೇ ಹೋಗಿದ್ದರು
ತರಕಾರಿ ಮಾರುವಾಕೆ "ಕಡಿಮೆ ಬೆಲೆಗೆ ಕೋಡುತ್ತೇನೆ ನಾಳೆ ಏನಂದ್ರೂ ಗ್ರಹಣ ಜನರು ಮನೆ ಬಿಟ್ಟು ಬರುವುದಿಲ್ಲ ಅದಕ್ಕೆ ಅಂಗಡಿ ಮುಚ್ಚುತ್ತೇವೆ ಅಂದರಂತೆ"
ಏನು ಜನ ಮಾರಾಯ್ರೆ ಸ್ವಲ್ಪನೂ ವೈಜ್ಞಾನಿಕ-ಯೋಚನೆ ಬೇಡವಾ
ಗ್ರಹಣ ಬಂತು ಅಂದ್ರೆ ದೇಶಾದ್ಯಂತ ಅಘೋಶಿತ ಕರ್ಫ್ಯೂ ಸಾಮಾನ್ಯ
ಜನ ಮನೆ ಬಿಟ್ಟು ಹೋರ ಬರುವುದಿಲ್ಲ ಅನ್ನುತ್ತಾರೆ. ಇವರಿಗೇನೆನ್ನಬೇಕು?

ರಾಜ್ಯದ ಬಹುತೇಕ ಶಾಲಾ-ಕಾಲೇಜುಗಳಿಗೆ ರಜೆ ,ಗ್ರಹಣದ ಬಗ್ಗೆ ಒಂದು ಕನಿಷ್ಟ ಮಾಹಿತಿಯನ್ನೂ
ವಿಧ್ಯಾರ್ಥಿಗಳಿಗೆ ನೀಡದೆ ವಿಜ್ಞಾನ ಕಲಿಸಿದರೆ ಏನು ಉಪಯೋಗ ಅಂತ
ನಮ್ಮ ವಿಜ್ಞಾನ ಬುದ್ದಿ ಏನಂದರೂ ವಿದೇಶೀ-ಬಹುರಾಷ್ಟ್ರಿಯ ಕಂಪನಿಗಳ ಮುಷ್ಠಿಯಲ್ಲಿದೆ
ಕೆಟ್ಟ ಕೆಲಸ ಮಾಡಲು ತನ್ನೇಲ್ಲಾ ಬುದ್ದಿ ಉಪಯೋಗಿಸ್ತಾರೆ ಈ ಜನ

ಶಾಲಾ -ಕಾಲೇಜುಗಳಲ್ಲಿ ಕನಿಷ್ಟ ಗ್ರಹಣದ ಬಗ್ಗೆ ವಿಧ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸ ಆಗ ಬೇಕಿತ್ತು ಕೆಲವರಿಗದರೂ ಅದರ ಬಗ್ಗೆ ಅರಿವಿದೆಯಲ್ಲ ಅಂತ ಸಂತಸಪಡೋಣ

ಶನಿವಾರ, ಜನವರಿ 16, 2010

ರಾಹು ಕೇತು ಹಾಗು ಗ್ರಹಣ

ಹೌದಲ್ವೇ? ಹಿಂದೂ ಪಂಚಾಂಗದಲ್ಲಿ ಸೂರ್ಯನಿಗೆ ರಾಹು ಅಥವಾ ಕೇತು ಹಿಡಿದಾಗ ಸೂರ್ಯಗ್ರಹಣವಾಗುತ್ತದೆ ಅನ್ನುತ್ತಾರಲ್ಲಾ ಹಾಗಾದರೆ ರಾಹು-ಕೇತು ಗಳು ಯಾರು?  
ನಿಮಗೆಲ್ಲಾ ಸೂರ್ಯ ಚಂದ್ರ ಹಾಗು ಭೂಮಿ ಒಂದೇ ರೇಖೆಯಲ್ಲಿ ಬಂದಾಗ ಗ್ರಹಣವಾಗುತ್ತದೆ ಎಂದು ಗೊತ್ತಿದೆ  ಅದ್ರೆ ಚನ್ನಾಗಿ ನೆನಪಿರಲಿ,  ಸೂರ್ಯ ಚಂದ್ರ ಹಾಗು ಭೂಮಿ ಒಂದೇ ಸಮತಲದಲ್ಲೂ ಬಂದಾಗ ಮಾತ್ರ ಗ್ರಹಣವಾಗುತ್ತದೆ ಇಲ್ಲವೆಂದರೆ ಪ್ರತೀ ಅಮವಾಸ್ಯೆಯೂ ಸಹ ಸೂರ್ಯಗ್ರಹಣವಾಗಬೇಕಿತ್ತು
ಪ್ರತೀ ಹುಣ್ಣಿಮೆಯೂ ಸಹ ಚಂದ್ರಗ್ರಹಣವಾಗಬೇಕಿತ್ತು ಆದರೆ ಹಾಗಾಗುವುದಿಲ್ಲ ಏಕೆಂದರೆ ಭೂಮಿ-ಸೂರ್ಯನನ್ನು ಹಾಗು ಚಂದ್ರ-ಭೂಮಿಯನ್ನು ಬೇರೇ ಸಮತಲಗಳಲ್ಲಿ ಸುತ್ತುತ್ತವೆ

ಕೆಲವೊಮ್ಮೆ ಮಾತ್ರ ಆ ಎರಡು ಸಮತಲಗಳು ಸಂಧಿಸುವ ಬಿಂದುಗಳಲ್ಲಿ ಸೂರ್ಯ ಅಥವಾ ಚಂದ್ರ ಬಂದಾಗ ಗ್ರಹಣವಾಗುತ್ತದೆ 

ಸ್ವಲ್ಪಕಾಲ ಭೂಮಿಯ ಸುತ್ತ ಸೂರ್ಯನೂ ಸುತ್ತುತ್ತಾನೆ ಎಂದು ಭಾವಿಸಿ, ಚಂದ್ರನೂ ಮಾಸಕ್ಕೆ ಒಮ್ಮೆ ಸುತ್ತುತ್ತಾನೆ ಅವರಿಬ್ಬರು ಸುತ್ತುವ  ಸಮತಲಗಳು ಸಂಧಿಸುವ ಬಿಂದುಗಳೇ ರಾಹು ಹಾಗು ಕೇತು
(ಭಾರತೀಯ ಹಿಂದೂ ಖಗೋಳವಿಜ್ಞಾನದಲ್ಲಿ  ಭೂಕೇಂದ್ರವಾದವನ್ನು ಸರಿ ಎಂದೇನು ಹೇಳಿಲ್ಲ ಪಂಚಾಗದ ಅನುಕೂಲಕ್ಕಾಗಿ ಮಾತ್ರ ಹಾಗೆ ಬಿಂಬಿಸಲಾಗಿದೆ ಅದು ಬೇರೆಯೇ ವಿಷಯ)

ಶುಕ್ರವಾರ, ಜನವರಿ 15, 2010

ಈ ಬಾರಿಯ ಗ್ರಹಣದ ಚಿತ್ರಗಳಿವು

ಈ ಬಾರಿಯ ಗ್ರಹಣದ ಚಿತ್ರಗಳಿವು(15 January 2010)
( ಶಿವಮೋಗ್ಗದಲ್ಲಿ )
ನೋಡಿ ನಿಮ್ಮ ಅಭಿಪ್ರಾಯ ಕಮೆಂಟ್ ಗಳಲ್ಲಿ ತಿಳಿಸಲು ಮರೆಯದಿರಿಕಂಕಣ ಸೂರ್ಯಗ್ರಹಣ ವೀಕ್ಷಿಸಲು ಸದ್ಯ ಮಳೆರಾಯನೇನೂ ಅಡ್ಡಿಬರಲಿಲ್ಲ

ಸೂರ್ಯನ ಬಿಂಬಗಳಿವು

ನಾನೆ ನಿರ್ಮಿಸಿದ ಮೂರು ಇಂಚಿನ ದೂರದರ್ಶಕದಲ್ಲಿ ಮೂಡಿದ ಸೂರ್ಯನ ಬಿಂಬಗಳಿವು
ಈ ಛಾಯಚಿತ್ರಗಳು ಕಳೆದ ೨೦೦೮ರ ಆಗಸ್ಟ್ ೦೨ರಲ್ಲಿ ಸಂಭವಿಸಿದ  ಗ್ರಹಣದ್ದು(ಕರ್ನಾಟಕದಲ್ಲಿ ಬಹಳ ಕಡೆ ಕಂಡಿರಲ್ಲಿಲ್ಲ ಶಿವಮೋಗ್ಗದಲ್ಲಿ ನನಗೆ ಹೇಗೋ ಕಂಡಿತ್ತು ಚಿತ್ರದ ಗುಣಮಟ್ಟ ನೋಡಿ ನಾನೆ ಸ್ವತ: ಆಶ್ಚರ್ಯಪಟ್ಟೆ ಸೂರ್ಯನ ಹಳದಿ ಬಣ್ಣ ಹೇಗೆ ಸ್ಪಷ್ಟವಾಗಿ ಕಾಣುತ್ತಿದೆ ನೋಡಿ )
(video SnapShots )
ಈ ಚಿತ್ರಗಳು ಈ ವರ್ಷದಲ್ಲಿ ಬೆಳಿಗ್ಗೆ  ಘಟಿಸಿದ  ಪಾರ್ಶ್ವ ಸೂರ್ಯಗ್ರಹಣದ್ದು
ಇದನ್ನು ಮೋಡದ ಮರೆಯಿದ್ದರಿಂದ ಕ್ಯಾಮರಾದಿಂದ ನೇರವಾಗಿ ಚಿತ್ರಗಳನ್ನು ತೆಗೆದೆ(ಬೆಳಿಗ್ಗೆ ಸೂರ್ಯನ ಪ್ರಖರತೆ ಇರುವುದಿಲ್ಲ ನನ್ನ ಕ್ಯಾಮರಾದಲ್ಲಿ ಅಷ್ಟು ಜ಼ೂಮ್-ಸೌಲಭ್ಯವೂ ಇತ್ತು ಅದ್ದರಿಂದ ನೇರ ಛಾಯಾಗ್ರಹಣ ಸಫಲವಾಯಿತು ನೀವು ಯಾರೂ ಇದನ್ನು ಪ್ರಯತ್ನಿಸಬೇಡಿ ೨೦೧೦ ರ ಸೂರ್ಯಗ್ರಹಣದಲ್ಲಿ ಅಂತೂ ಎಂದಿಗೂ ಸಲ್ಲ)(video SnapShots )

ಇನ್ನು ಮುಂದೆ ನಾನು ಈ ಬಾರಿಯ ಗ್ರಹಣದ ಚಿತ್ರಗಳನ್ನು ಕಾಲಕಾಲಕ್ಕೆ ನೀಡುವವನಿದ್ದೇನೆ 
ಈ ಬಾರಿಯ ಕಂಕಣ  ಸೂರ್ಯಗ್ರಹಣ ಅತೀ ದೀರ್ಘಾವದಿ ಗ್ರಹಣಗಳಲ್ಲಿ ಒಂದು, ನೋಡೋಣ ಹವಾಮಾನದ ಅನುಕೂಲವಿದ್ದರೆ ಅಕಾಲಿಕ ಮೋಡ,ಮಳೆಯ ಕಾಟವಿಲ್ಲದಿದ್ದರೆ ಇದನ್ನು ಸಫಲವಾಗಿ ವೀಕ್ಷಿಸಬಹುದೆಂದು ನಂಬಿದ್ದೇನೆ

ದೂರದರ್ಶಕದ ಸಹಾಯದಿಂದ ಸೂರ್ಯನ ಬಿಂಬ ಪಡೆಯುವುದು

ದೂರದರ್ಶಕದ ಸಹಾಯದಿಂದ ಸೂರ್ಯನ ಬಿಂಬ ಪಡೆಯುವುದು  ಸುರಕ್ಷಿತವೂ ಉತ್ತಮವೂ ಆಗಿದೆ ಇದರಲ್ಲಿ ಸೂರ್ಯನ ಉತ್ಕೃಷ್ಟ ಗುಣಮಟ್ಟದ ಚಿತ್ರಗಳನ್ನು ಪಡೆಯಬಹುದಾಗಿದೆ, ಇದರಲ್ಲಿ ಸೂರ್ಯನ ಬಿಂಬದಲ್ಲಿನ ಎಲ್ಲಾ ವಿವರಗಳು ಖಚಿತವಾಗಿ ಮೂಡಿಬರುತ್ತವೆ

ವಿಜ್ಞಾನಿಗಳು ಕ್ಯಾಮರವುಳ್ಳ ದೂರದರ್ಶಕಗಲಿಂದ ಚಿತ್ರಗಳನ್ನು ಪಡೆಯುತ್ತಾರೆ, ರೋಹಿತದ ಅಧ್ಯಯನ ಮಾಡುತ್ತಾರೆ ಈಗ ದೂರದರ್ಶಕಗಾಗಿಯೇ ವಿಶೇಷವಾಗಿ ವಿನ್ಯಾಸಗೋಳಿಸಿದ  ಅತ್ಯಾಧುನಿಕ
ಹೈ-ರೆಸಲ್ಯೂಶನ್ CCDಅಥವಾ CMOS ಕ್ಯಾಮರಾಗಳೂ ಲಭ್ಯವಿದೆ ಸೂರ್ಯನನ್ನು ವೀಕ್ಷಿಸಲು ವಿಶೇಷ Solar Filterಲಭ್ಯವಿದೆ

ನಮ್ಮ ಬಳಿಯೂ ದೂರದರ್ಶಕವಿದ್ದರೆ, ದೂರದರ್ಶಕದ ಬಗ್ಗೆ ಸಾಕಷ್ಟು ಜ್ಞಾನ ಹೊಂದಿದ್ದರೆ ನಾವು ಸಹ ಸೂರ್ಯನ ಉತ್ಕೃಷ್ಟ ಗುಣಮಟ್ಟದ ಬಿಂಬವನ್ನು ಸುರಕ್ಷಿತವಾಗಿ ವೀಕ್ಷಿಸಬಹುದು

ದೂರದರ್ಶಕದ ಸಹಾಯದಿಂದ ಸೂರ್ಯನನ್ನು ವೀಕ್ಷಿಸಬೇಕೆಂದಿರುವವರಿಗೆ,ದೂರದರ್ಶಕ  ಹೊಂದಿರುವವರಿಗೆ ಕೆಲವು ಸಲಹೆಗಳು
೧)ಆ ದೂರದರ್ಶಕ  ಸೂರ್ಯನ ಬಿಂಬವನ್ನು ಮೂಡಿಸಲು ಅನುಕೂಲಕರವಾಗಿರಬೇಕು ಇದಕ್ಕೆ ಭೌತಶಾಸ್ತ್ರದ ಅರಿವು ಜ್ಞಾನ ಅತ್ಯವಶ್ಯಕ  
೨)ನೆನಪಿರಲಿ ಸರಿಯಾದ ಜ್ಞಾನವಿಲ್ಲದೆ ದೂರದರ್ಶಕವನ್ನು ಬಳಸಿ ಸೂರ್ಯನನ್ನು ನೋಡುವುದು ಅತೀ ಅಪಾಯಕಾರಿ, ನೀವು ರಾತ್ರಿ ವೀಕ್ಷಿಸುವ ನ್ಯೂಟೋನಿಯನ್, ಕ್ಯಾಸಿಗ್ಗ್ರ‍ೇನಿಯನ್  ದೂರದರ್ಶಕಗಳು ಗ್ರಹಣ ವೀಕ್ಷಿಸುವ ಸೌಲಭ್ಯ ಹೊಂದಿರದೇ ಇರಬಹುದು ದಯಮಾಡಿ ಇದರ EYE_PICE ನಲ್ಲಿ ಕಣ್ಣಿಟ್ಟು ನೋಡಲೇಬೇಡಿ
೩)ಗೆಲಿಲಿಯನ್ ಮಾದರಿ ಬಳಸುವ ಬೈನಾಕ್ಯುಲರ್ ಗಳಲ್ಲಿ ಸೂರ್ಯನ ಬಿಂಬ ಮೂಡುವುದಿಲ್ಲ ವಿಫಲ ಪ್ರಯತ್ನ ಮಾಡಿ ಅಪಾಯ ಆಹ್ವಾನಿಸದಿರಿ

ದೂರದರ್ಶಕಗಳಿಗೆ ಸರಿಯಾದ ಪರದೆ,Shadow mask ಸರಿಯಾದ
Apeartureಅಗತ್ಯ

೪)ಆಧಾರ ಅಂದರೆ ಸ್ಟ್ಯಾಂಡ್ ಹೊಂದಿದ್ದರೆ ಅದು ಹೆಚ್ಚು ಅನುಕೂಲ ಇಲ್ಲವಾದಲ್ಲಿ ದೂರದರ್ಶಕವನ್ನು ಸರಿಯಾದ ಸ್ಥಿತಿಯಲ್ಲಿ ಗುರಿ ಇಡುವುದನ್ನು ಹಿಂದಿನ ದಿನವೇ ನಿಗದಿಪಡಿಸಿಕೊಳ್ಳುವುದೋಳ್ಳೆಯದು
ಆದರೂ ಆಧಾರವಿಲ್ಲದೆ ದೂರದರ್ಶಕವನ್ನು ನಿಭಾಯಿಸುವುದು ಕಷ್ಟ ಹಾಗು ದೀರ್ಘಕಾಲ ಇದನ್ನು ಮಾಡಲಾಗದು ಇದನ್ನು ಅನುಭವಿಗಳು,ಅರಿವಿರುವವರು ಮಾತ್ರ ಮಾಡಬಹುದು

೫)ನೆನಪಿರಲಿ ದೂರದರ್ಶಕದಿಂದ ಸೂರ್ಯಗ್ರಹಣ ವೀಕ್ಷಣೆ ಕೇವಲ ಭೌತಶಾಸ್ತ್ರದ ಅರಿವಿರುವವರಿಗೆ ಹಾಗು ದೂರದರ್ಶಕದ ಬಗ್ಗೆ ಜ್ಞಾನ ವಿರುವವರಿಗೆ ಮಾತ್ರ ಹೊಸಬರಿಗೆ, ಪ್ರಥಮ ಬಾರಿಗೆ ಯಾವುದೇ ಭೌತಶಾಸ್ತ್ರ,ಹಾಗು ಎಚ್ಚರಿಕೆಗಳ ಅರಿವಿಲ್ಲದವರಿಗೆ ಆಲ್ಲ ಇದರಿಂದ ಅಪಾಯ ಅಹ್ವಾನಿಸಬೇಡಿ

ಅಜ್ಞಾನಕ್ಕಿಂತಲೂ ಅಲ್ಪಜ್ಞಾನ ಅಪಾಯಕಾರಿ
ಬಲ್ಲವರ ಮಾರ್ಗದರ್ಶನದಲ್ಲೇ ಗ್ರಹಣ -ವೀಕ್ಷಿಸಿ

ಮುಂದಿನ ಸಂಚಿಕೆಯಲ್ಲಿ ಗ್ರಹಣದ  ಛಾಯಾಚಿತ್ರಗಳನ್ನು ಪ್ರಕಟಿಸುತ್ತೇನೆ

ಪೂರ್ಣ ಸುರಕ್ಷಿತವಾದ ತಂತ್ರಗಳು

ಗ್ರಹಣದ ಕನ್ನಡಕ ಅಗಲಿ, ವೆಲ್ಡಿಂಗ್ ಗಾಜು ಆಗಲಿ , ಇವು ಸೂರ್ಯನ ಬೆಳಕನ್ನು ನೇರವಾಗಿ ನೋಡುವ ತಂತ್ರಗಳಾಗಿದ್ದರಿಂದ ಇವು ಶೇಕಡಾ ೯೦ ರವರೆಗೆ ಮಾತ್ರ ಸುರಕ್ಷಿತ ಎನ್ನಬಹುದುಇನ್ನು ಈ ಸಂಚಿಕೆಯಲ್ಲಿ ಪೂರ್ಣ ಸುರಕ್ಷಿತವಾದ ತಂತ್ರಗಳ ಬಗ್ಗೆ ತಿಳಿಸುತ್ತೇನೆಇದರಲ್ಲಿ ಸೂರ್ಯನ ಬಿಂಬವನ್ನು ಮಾತ್ರ ನೋಡುತ್ತೇವೆ ಇದರಲ್ಲಿ ಸೂರ್ಯನ ಬೆಳಕು ಯಾವುದೇ ರೀತಿಯಲ್ಲಿ ನಮ್ಮ ಕಣ್ಣನ್ನು ನೇರವಾಗಿ ಪ್ರವೇಶಿಸುವುದಿಲ್ಲ ಇವು ಮೊದಲ ವಿಧಾನಗಳಿಗಿಂತ ಹೆಚ್ಚು ಸುರಕ್ಷಿತ೧)ಹಂಚಿಮನೆಯ ಹಂಚಿನಲ್ಲಿಸಣ್ಣ ರಂಧ್ರವಿದ್ದರೆ ಅದು ಸೂಜಿ-ಬಿಂಬ-ಗ್ರಾಹಕದಂತೆ ಕೆಲಸ ಮಾಡುತ್ತದೆ ಆ ರಂಧ್ರದ ಮೂಲಕ ಬರುವ ಬೆಳಕಿನಿಂದ ಸೂರ್ಯನ ಬಿಂಬ ಮೂಡಿರುತ್ತದೆ ಆ ಬಿಂಬವನ್ನು ಮಾತ್ರ ವೀಕ್ಷಿಸಿ೨)ಇದನ್ನು ನಾವು ಸಹ ಪರಿಣಾಮಕಾರಿಯಾಗಿ ಮಾಡಬಹುದು ಅದು ಸೋಲಾರ್-ರಿಫ಼್ಲೆಕ್ಟರ್ ಸಹಾಯದಿಂದ

ಅದನ್ನು ತಯಾರಿಸುವುದನ್ನು ತಿಳಿಯಿರಿ

ಒಂದು ನಿರುಪಯುಕ್ತ ಪ್ಲಾಸ್ಟಿಕ್-ಬಾಲ್ ತೆಗೆದುಕೊಳ್ಳಿ ಅದಕ್ಕೆ ಒಂದು ಸಣ್ಣ ಕನ್ನಡಿಯನ್ನು(ಸುಮಾರು ೧೦ಮೀಮೀ ಗಾತ್ರದ್ದು ಅದನ್ನು ವಸ್ತ್ರವಿನ್ಯಾಸದಲ್ಲಿ ಹೆಚ್ಚಾಗಿ ಬಳಸುತ್ತಾರೆ) ಸೆಲ್ಲೋ ಟೇಪ್ ಸಹಾಯದಿಂದ ಅಂಟಿಸಿ

ಇದನ್ನು ಒಂದು ಸಿಲಿಂಡರ್ ಗಾತ್ರದ ವಸ್ತುವಿನ ಮೇಲೆ ಇರಿಸಿ

ಈಗ ಬಾಲ್ ಅನ್ನು ಬೇಕಾದಂತೆ ತಿರುಗಿಸಬಹುದು ಇದರ ಸಹಾಯದಿಂದ ಸೂರ್ಯನ ಬಿಂಬವನ್ನು ದೂರದಲ್ಲಿ ಮೂಡಿಸಿ ನೋಡಿ


೩)ದೂರದರ್ಶಕದ ಸಹಾಯದಿಂದ ಸೂರ್ಯನ ಬಿಂಬ ಪಡೆಯಬಹುದು

ದೂರದರ್ಶಕದ ಸಹಾಯದಿಂದ ಸೂರ್ಯನನ್ನು ವೀಕ್ಷಿಸಬೇಕೆಂದಿರುವವರಿಗೆ,ದೂರದರ್ಶಕ ಹೊಂದಿರುವವರಿಗೆ ಕೆಲವು ಸಲಹೆಗಳನ್ನು ಮುಂದಿನ ಸಂಚಿಕೆಯಲ್ಲಿ ನೀಡಲಾಗಿದೆ

ಸುರಕ್ಷಿತ ಗ್ರಹಣ-ವೀಕ್ಷಿಸುವ ತಂತ್ರಗಳು

ಸುರಕ್ಷಿತ ಗ್ರಹಣ-ವೀಕ್ಷಿಸುವ  ತಂತ್ರಗಳಲ್ಲಿ ಎರಡು ವಿಧಗಳಿವೆ
೧)ಸೂರ್ಯನನ್ನೇ ಅಭಿಮುಖವಾಗಿ ಒಂದು ಸುರಕ್ಷಿತ-ವಸ್ತುವಿನ ಮೂಲಕ ನೋಡುವುದು
೨)ಸೂರ್ಯನ ಬಿಂಬವನ್ನು ನೋಡುವುದು

ಮೊದಲ ವಿಧಾನದಲ್ಲಿ ಸೂರ್ಯನನ್ನು ಈ ಕೆಳಕಂಡ ರೀತಿಯಲ್ಲಿ ನೋಡಬಹುದು
೧)ಅಲ್ಯುಮಿನಿಯಮ್ ಲೇಪಿತ ಮಿಲಾರ್-ಪ್ಲಾಸ್ಟಿಕ್ ಕನ್ನಡಕಗಳನ್ನು ಕೆಲವು ಸಂಸ್ಥೆಗಳು  ವಿತರಿಸುತ್ತವೆ ಅವು ಈ ಅತಿ-ನೇರಳೆ ಕಿರಣಗಳನ್ನು ಶೊಧಿಸಬಲ್ಲವು

೨)ವೆಲ್ಡಿಂಗ್ ನಲ್ಲಿ ಬಳಸುವ ನಂಬರ್-೧೪ ರ ಗಾಜು ಸಹ ಸುರಕ್ಸಿತವಾಗಿದೆ
ಆದರೆ ಮೇಲಿನ ಎರಡೂ ವಸ್ತುಗಳು ಸುರಕ್ಷಿತಾ-ಮಾನದಂಡಗಳನ್ನು ಸರಿಯಾಗಿ ಪಾಲಿಸಿವೆಯೇ ಎಂದು ಖಚಿತಪಡಿಸಿಕೋಳ್ಳಿ ಹಾಗು ಅದರಲ್ಲಿ ರಂಧ್ರಗಳಿರದಂತೆ ಎಚ್ಚರ ವಹಿಸಿ, ಅದು ಕಣ್ಣು,ಕಣ್ಣಿನ ಸುತ್ತ ಪೂರ್ಣವಾಗಿ ವ್ಯಾಪಿಸುವಂತಿರಲಿ ಹಾಗು ಯಾವುದೇ ರೀತಿಯಲ್ಲಿ  ಸೂರ್ಯನ ಕಿರಣಗಳು ನೇರವಾಗಿ ಕಣ್ಣನ್ನು ಪ್ರವೇಶಿಸದಂತಿರಲಿ


ಅದರೆ ಕೆಳಕಂಡ ವಿಧಾನ-ವಸ್ತುಗಳ ಬಗ್ಗೆ ಖಚಿತವಾಗಿ ಸುರಕ್ಷಿತ ಎನ್ನಲಾಗದು ಅವು:
೧)ಗಾಜಿಗೆ ಹೊಗೆಯ ಲೇಪನ ಮಾಡಿ ನೋಡುವುದು:-ಇದರಲ್ಲಿ ಹೊಗೆ ಎಷ್ಟು ದಟ್ಟವಾಗಿದೆ ಹಾಗು ಅದು ಹೇಗೆ ವ್ಯಾಪಿಸಿದೆ ಎನ್ನುವುದರ ಮೇಲೆ ಅವಲಂಬಿಸಿದೆ ಇದು ಪೂರ್ಣ ಸುರಕ್ಷಿತವಲ್ಲ

೨)ಸಗಣಿ ನೀರಿನಲ್ಲಿ ಸೂರ್ಯನ ಪ್ರತಿಬಿಂಬ ನೋಡುವುದು:-
)ಎಕ್ಸ್ ಪೊಸ್ ಆದ ನೆಗಟಿವ್ ಗಳು: ಸರ್ವಥಾ ಸುರಕ್ಷಿತವಲ್ಲ
೪)ಎಕ್ಸ್ ಪೊಸ್ ಆದ ಎಕ್ಸ್-ರೇ ಹಾಳೆಗಳನ್ನು ಒಂದ ಮೇಲೊಂದಿಟ್ಟು ನೋಡುವುದು :ಇದರಲ್ಲಿ ಹಾಳೆಯ ಕಪ್ಪು ಭಾಗವನ್ನೇ ಬಳಸಿ ನೋಡಬೇಕು ಸರಿಯಾಗಿ ಜೋಡಿಸಿ ನೋಡಲು ಬಲ್ಲವರ ಮಾರ್ಗದರ್ಶನ ಅಗತ್ಯ ಆದ್ದರಿಂದ ಇದು ಸ್ವಲ್ಪ, ಆದ್ದರಿಂದ ಇದು ಸುರಕ್ಷಿತ ಎನ್ನಲಾಗದು

ಗ್ರಹಣದ ಕನ್ನಡಕ ಅಗಲಿ, ವೆಲ್ಡಿಂಗ್ ಗಾಜು ಆಗಲಿ , ಇವು ಸೂರ್ಯನ ಬೆಳಕನ್ನು ನೇರವಾಗಿ ನೋಡುವ ತಂತ್ರಗಳಾಗಿದ್ದರಿಂದ ಇವು ಶೇಕಡಾ ೯೦ ರವರೆಗೆ ಮಾತ್ರ ಸುರಕ್ಷಿತ ಎನ್ನಬಹುದು

 ಇನ್ನು ಮುಂದಿನ ಸಂಚಿಕೆಯಲ್ಲಿ ಸೂರ್ಯನ ಬಿಂಬವನ್ನು ನೋಡುವ ಬಗ್ಗೆ ತಿಳಿಸುತ್ತೇನೆ
ಅವು ಇದಕ್ಕಿಂತ ಹೆಚ್ಚು ಸುರಕ್ಷಿತ ಮತ್ತು ಒಳ್ಳೆಯ ಫಲಿತಾಂಶವನ್ನು ನೀಡುತ್ತವೆ

ಸೂರ್ಯಗ್ರಹಣ

ಎಲ್ಲರಿಗೂ  ನಮಸ್ಕಾರ ಇದು ನನ್ನ ಉಪ-ಬ್ಲಾಗ್

ಇದರಲ್ಲಿ ಖಗೋಳ ವಿಜ್ಞಾನದ ಸಕಾಲಿಕ ವಿಷಯಗಳ ಬಗ್ಗೆ ಚರ್ಚಿಸುತ್ತೇನೆ

ಇದರ ಲೇಖನಗಳು ತಾತ್ಕಾಲಿಕವಾಗಿ ಮಾತ್ರ ಲಭ್ಯವಿರಬಹುದು ಅಥವಾ ಇದು ಕೆಲಕಾಲ ಮಾತ್ರ ಅಸ್ತಿತ್ವದಲ್ಲಿರಬಹುದು ,"ಪ್ರತಿಫಲನ" ದಷ್ಟು ಇದನ್ನೂ ಗಮನ ಹರಿಸುತ್ತೀರ ಎಂದುಕೊಂಡಿದ್ದೇನೆ

ಈಗ ಸದ್ಯ ಸೂರ್ಯಗ್ರಹಣದ ಬಗೆಗಿನ ಚರ್ಚೆಗಾಗಿ ಮೀಸಲಿದೆ
ನಿಮಗೆಲ್ಲಾ ತಿಳಿದಿರುವಂತೆ ಈ ಬಾರಿ ದೀರ್ಘಕಾಲದ ಸಂಕ್ರಮಣ ಸೂರ್ಯಗ್ರಹಣ ಸಂಭವಿಸಲಿದೆ
ಈ ಸೂರ್ಯ-ಚಂದ್ರರ  ನೆರಳು-ಬೆಳಕಿನಾಟವನ್ನು ವಿಜ್ಞಾನದ ಎಚ್ಚರಿಕೆಯಲ್ಲಿ ಸುರಕ್ಷಿತವಾಗಿ ನೋಡಿ ಆನಂದಿಸಬಹುದು 

ನಾನು ಇದುವರೆಗೂ ಮೂರು ಸೂರ್ಯಗ್ರಹಣಗಳನ್ನೂ ಹಾಗು ಒಮ್ಮೆ ಬುಧ-ಸಂಕ್ರಮಣವನ್ನೂ, ಒಮ್ಮೆ ಶುಕ್ರ-ಸಂಕ್ರಮಣವನ್ನೂ ವೀಕ್ಷಿಸಿದ್ದೇನೆ (ಚಂದ್ರಗ್ರಹಣ ಮಾತ್ರ ಒಂದೂ ಇಲ್ಲ)

ಸೂರ್ಯಗ್ರಹಣ ವೀಕ್ಷಿಸಲು  ಸಿದ್ಧರಾಗುವ ಮೋದಲು ಕೆಲವು ವಿಚಾರಗಳಲ್ಲಿ ಎಚ್ಚರದಿಂದಿದ್ದರೆ ಸೂರ್ಯಗ್ರಹಣವನ್ನು ಸೂಕ್ತವಾಗಿ ನೋಡಿ ಆನಂದಿಸಬಹುದು

ಅದು ಸರಿ ಅಸುರಕ್ಷಿತ ಸೂರ್ಯಗ್ರಹಣ ವೀಕ್ಷಣೆ ಇಷ್ಟೋಂದು ಅಪಾಯಕಾರಿಯೇ ಅದು ಏಕೆ

೧) ಮೋದಲನೆಯದಾಗಿ ಸೂರ್ಯನನ್ನು ಗ್ರಹಣದ ಸಮಯದಲ್ಲಿ ಮಾತ್ರವಲ್ಲ ಗ್ರಹಣವಿಲ್ಲದಾಗಲೂ ನೇರವಾಗಿ ದಿಟ್ಟಿಸಲೇಬಾರದು
೨) ನೀವು ಗಮನಿಸಿರಬಹುದು ಹೊರಗೆ ಬಿಸಿಲಿನಲ್ಲಿ ತಿರುಗಾಡಿ ಮನೆಯೋಳಗೆ ಪ್ರವೇಶಿಸಿದಾಗ ತಟ್ಟನೆ ಮನೇಯೋಳಗಿನ ವಸ್ತುಗಳು ಕಾಣುವುದಿಲ್ಲ ಅದಕ್ಕೆ ಕಾರಣ ನಮ್ಮ ಕಣ್ಣಿನ ವಪೆ ಅದು ಬೆಳಕಿನ ತೀವ್ರತೆಗನುಸಾರವಾಗಿ ತನ್ನ ಗಾತ್ರವನ್ನು ಬದಲಿಸುತ್ತಾ ಅವಶ್ಯಕ ಬೆಳಕನ್ನು ಮಾತ್ರ ಕಣ್ಣಿನೋಳಗೆ ಬಿಡುತ್ತದೆ ಆದರೆ  ನೆನಪಿರಲಿ ಅದರ ಚಲನೆ ತುಂಬಾ ನಿಧಾನ ಹಾಗು ಅದು ಅನ್ನೈಛ್ಛಿಕ ಕ್ರಿಯೆಯಾಗಿದ್ದು ಅದನ್ನು ನಾವು ನಮ್ಮ ಇಚ್ಚಾನುಸಾರ ನಿಯಂತ್ರಿಸಲು ಬರುವುದಿಲ್ಲ(ಹೇಗೆ ಹೃದಯದ ಬಡಿತದ ವೇಗ ನಮ್ಮಿಚ್ಚೆಯಂತೆ ಹೆಚ್ಚು-ಕಡಿಮೆ ಮಾಡಲು ಸಾಧ್ಯವಿಲ್ಲವೋ ಹಾಗೆ)

ಸೂರ್ಯಗ್ರಹಣಕಾಲದಲ್ಲಿ ಸೂರ್ಯನೇನೋ ಮರೆಯಾಗಿರುವುದೇ ಆದರೆ ಆಗ ನಮ್ಮ  ಕಣ್ಣಿನ ವಪೆ ಹಿಗ್ಗಿರುತ್ತದೆ  ಗ್ರಹಣ ಹಟಾತ್ತಾಗಿ ಬಿಡುವಾಗ ಒಮ್ಮೆಗೆ ಬೆಳಕಿನ ತೀವ್ರತೆ ಹೆಚ್ಚುವುದರಿಂದ ಆ ಸನ್ನಿವೇಶ ಎದುರಿಸಲು ವಪೆ ಸಿದ್ಧವಾಗಿರುವುದಿಲ್ಲ ಆಗ ನಮ್ಮ ಕಣ್ಣಿಗೆ ಕೇವಲ ಸಾಮನ್ಯ ಬೆಳಕಿನಿಂದಲೇ ಹಾನಿಯಾಗಬಹುದು
( ಒಮ್ಮೊಮ್ಮೆ ಮಧ್ಯರಾತ್ರಿ ಎದ್ದಾಗ ಒಮ್ಮೆಗೆ ಲೈಟ್ ಆನ್ ಮಾಡಿದಾಗ ಕಣ್ಣಿಗೆನೋವಾಗುವುದನ್ನು ಗಮನಿಸಿರಬಹುದು- ಮೊಬೈಲ್ ಸ್ಕ್ರೀನ್ ನೋಡಿದಾಗಲೂ ಹೀಗಾಗುತ್ತದೆ ಮಲಗುವಾಗ ಮೊಬೈಲ್ ಹತ್ತಿರದಲ್ಲಿಡಬೇಡಿ)
ಇಷ್ಟು ಹಾನಿ ಸಾಮಾನ್ಯ ಬೆಳಕಿನಿಂದಲೇ ಆಗುತ್ತದೆ , 


೩)ಇನ್ನು ಕೇಳಿ ಅಲ್ಟ್ರಾ-ವಯೋಲೆಟ್ ಹಾಗು ಇತರೆ ಕಿರ‍ಣಗಳ ಅಪಾಯವನ್ನು
ಕೆಲವು ತರಂಗಾತರದ ಅಲ್ಟ್ರಾ-ವಯೋಲೆಟ್ ಕಿರಣಗಳು ಕಣ್ಣಿನ ರೆಟಿನಾವನ್ನು ಹಾನಿಗೋಳಿಸುವಷ್ಟು ಶಕ್ತಿಶಾಲಿಯಾಗಿರುತ್ತವೆ ಆದ್ದರಿಂದ ಸೂರ್ಯನನ್ನು ವೀಕ್ಷಿಸುವಾಗ ಈ ಕಿರಣಗಳಿಂದ ಮುಕ್ತರಾಗಿರುವುದು ಅವಶ್ಯಕ
೪)ಆ ನಂತರದ ಕಿರಣಗಳಾದ ,X-rays  ಹಾಗು ಗಾಮ ಕಿರಣಗಳೂ ಸಹ ಅಪಾಯಕಾರಿಯೇ ಆದರೆ ಇವ್ಯಾವುವೂ ಭೂ ವಾತಾವಣವನ್ನು ಭೇದಿಸಿ ನೆಲದ ವರೆಗೆ ಬರುವ  ಸಾಹಸವನ್ನು ಮಾಡುವುದಿಲ್ಲ : ದುರದೃಷ್ಟವಶಾತ್ ಬಂದರೆ? ಅದಕ್ಕೆ ಹುಷಾರಾಗಿರಬೇಕು
೪)ಇನ್ನು ಕಾಸ್ಮಿಕ್-ಕಿರಣಗಳ ಬಗ್ಗೆ  ಮಾನವನಿಗೆ ಇದುವರೆಗೂ ಪೂರ್ಣವಾಗಿ ಗೊತ್ತಿಲ್ಲ ಅದು ವಿಪರೀತ ಅಪಾಯಕಾರಿಯಗಿರುವುದರಿಂದ ಅದರ ಬಗ್ಗೆಯೂ ಎಚ್ಚರ ಅಗತ್ಯ

೫)ಇದರಲ್ಲಿ ಅಲ್ಟ್ರಾ-ವಯೋಲೆಟ್ ಕಿರಣಗಳ ಅಪಾಯದ ಸಾಧ್ಯತೆಗಳೇ ಹೆಚ್ಚು ಅದನ್ನು ನಿವಾರಿಸಿಕೋಂಡರೆ ನಮ್ಮ ಗ್ರಹಣ ವೀಕ್ಷಣೆ  ಬಹುತೇಕ ಸುರಕ್ಷಿತವಾಗಿರುವುದು

ಸರಿ ಮುಂದಿನ ಸಂಚಿಕೆಯಲ್ಲಿ ಸುರಕ್ಷಿತ ಗ್ರಹಣ-ವೀಕ್ಷಣಾ ವಿಧಾನಗಳ ಬಗ್ಗೆ ತಿಳಿಸುತ್ತೇನೆ
-ಹೋಸ ವರ್ಷದ ಶುಭಾಶಯಗಳು