ಮಂಗಳವಾರ, ಏಪ್ರಿಲ್ 13, 2010

ಸೂರ್ಯನ ಒಂದು ಇಂಟರ್ ವ್ಯೂ

(ಸೂರ್ಯನ ಅನುಕರಣೆಗೆ ಅನುಮತಿ ಕೋರಿ)
ಸೂರ್ಯನ ಸರಳ ವಿವರಣೆಗಳು ಹೀಗಿವೆ 

ಒಂದು ದಿನ ಬೇಗ ಬೆಳಿಗ್ಗೆ ಎದ್ದ ನಂತರ ಸೂರ್ಯನನ್ನೂ ನಮ್ಮ ಜೊತೆ ಚಹಾ ಕುಡಿಯಲು ಆಹ್ವಾನಿಸಿದರೆ ಹೇಗೆ?  ಸೂರ್ಯನೇನೂ ಬೇಜಾರು ಮಾಡಿಕೋಳ್ಳುವುದಿಲ್ಲ ಹಾಗೆ ಇಲ್ಲ "ನಾನೆ ದೊಡ್ಡವನು "ಅಂತ ಅಹಂಕಾರ ತೋರಿಸುವುದೂ ಇಲ್ಲ (ಈಗಿನ ನಮ್ಮ ಶಿವಮೊಗ್ಗದ ಬಿಸಿಲಿಗೆ ಚಹಾ ಬಿಸಿಲಲ್ಲಿ ಇಟ್ಟರೆ ಸಾಕು ಆವಿಯಾಗಿ ಸೂರ್ಯ ಕುಡಿದ ಹಾಗೆ ಅಂದುಕೊಂಡು ಸೂರ್ಯನನ್ನು ಬಯ್ಯುವಂತಗಬಾರದು)

ಅವನ ಬಗ್ಗೆ ಸ್ವಲ್ಪ ತಿಳಿದುಕೋಳ್ಳ ಬಹುದಲ್ಲವಾ 
ಅದ್ರೆ ಪಾಪ ನಮ್ಮ ಸೂರ್ಯ ಏನನ್ನೂ ತಿನ್ನುವುದಿಲ್ಲ ಅವನು ತಿನ್ನುವುದು  ರಾಶಿ ಹೈಡ್ರೊಜನ್ ಮಾತ್ರ

ಏನಾದರೂ ಆಗಲಿ ಬೆಳಿಗ್ಗೆ ತಾನೆ ಸೂರ್ಯ ಬೇಗ ಎದ್ದಿರುತ್ತಾನೆ ಕೆಂಪಗೆ ಪೂರ್ವದ ಮೋಡಗಳ ಮರೆಯಲ್ಲಿ ಇಣುಕುತ್ತಾನೆ  ಮಂಜಿನ ಪರದೆಯನ್ನು ಸರಿಸುತ್ತಿದ್ದಾನೆ(ಇಂದು ಹಗಲು ರಾತ್ರಿ ಸಮ ಸಮ ಕಾಲಾವಧಿಯದು- ಇಂದು ಮಾರ್ಚ್ ೨೦ - ಈ ಲೇಖನ ಸಿದ್ಧಪಡಿಸಲು ಪ್ರಾರಂಭಿಸುತ್ತಿರುವ  ದಿನ )

ಸೂರ್ಯನನ್ನು ಅಣ್ಣಾ ಬಾರೋ ನಿನ್ನ ಫೊಟೋ ತೆಗೆದು ಆಯ್ತು ಒಂದು ಇಂಟರ್ ವ್ಯೂ ನೀಡುತ್ತೀಯಾ ಅಂದರೆ ಸೂರ್ಯ ನೋ ಅನ್ನುವುದೇ ಹೌದಪ್ಪಾ ಸೂರ್ಯ ಯಾವತ್ತೂ ತುಂಬಾ ಸಮಯಪ್ರಜ್ಞೆ ಉಳ್ಳವನು ಯಾರು ಏನದರೂ ಆಗಲಿ ಪ್ರತೀದಿನ ವಿಶ್ವಕೆಲ್ಲಾ ಶಕ್ತಿ ಸಪ್ಲೆ ಮಾಡುತ್ತಲೇ ಇರಬೇಕು 

ನಮ್ಮ ಸೂರ್ಯ ಬ್ಯುಸೀ ಅದೂ ಐನೂರು ಕೋಟಿ ವರ್ಷಗಳಿಂದ ನೋ ರೆಸ್ಟ್ ,ನೊ ಟೈಮ್ ವೇಸ್ಟ್ 
ಆದ್ರೂ ನಮ್ಮ ವಿಜ್ಞಾನಿಗಳು ಸೂರ್ಯನ ಹಲವು ವಿವರಗಳನ್ನು ಪಡೆದಿದ್ದಾರೆ 

ಮೋನ್ನೆ ಸೂರ್ಯ ರಾತ್ರಿ ಕನಸಲ್ಲಿ ಬರ‍ೋದೆ?
 ನಾನು ಬೇಳಗಾಯ್ತು ಅಂದುಕೋದುಬಿಟ್ಟೇ!!!
ಸೂರ್ಯ ಎಳು ಬಣ್ಣದ ಕುದುರೆಗಳನ್ನ ಕಾಮನಬಿಲ್ಲೀನಲ್ಲಿ ಕಳ್ಸಿರುತ್ತೇನೆ ಅದನ್ನು ಏರಿ ಬಾ ಅನ್ನೋದೆ??
ನನಗೆ ಹೆದರಿಕೆ ಆದರೂ ಹೇಗೋ ಹೋದ್ರೆ ಸೂರ್ಯ ತನ್ನ ಬಗ್ಗೇ ಸ್ವಲ್ಪ ಪರಿಚಯ ಮಾಡಿಕೋಟ್ಟ
ಅದರ ಕೆಲವು ವಿಚಾರಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ


ಪ್ರಶ್ನೆ-ನಿನ್ನ ವಯಸ್ಸು ಎಷ್ಟು 
ಸೂರ್ಯ- ಐನೂರು

ಪ್ರಶ್ನೆ- ವರ್ಷನಾ 
ಸೂರ್ಯ- ಅಲ್ಲಪ್ಪಾ ಐನೂರು ಕೋಟಿ ವರ್ಷ
ಪ್ರಶ್ನೆ- ಭೂಮಿಗೆ ಇಲ್ಲಿಂದ ಎಷ್ಟು ಹೋತ್ತಿನ ಪ್ರಯಾಣ 
ಸೂರ್ಯ- ಎಂಟು ಪಾಯಿಂಟ್ ಮೂರು ನಿಮಿಷದ ಪ್ರಯಾಣ
ಪ್ರಶ್ನೆ-
KSRTC  ಬಸ್ ನಲ್ಲಾ? 
ಸೂರ್ಯ- ಅಲ್ಲVIBGYOR ನಲ್ಲಿ
ಪ್ರಶ್ನೆ- ಅಂದರೆ 
ಸೂರ್ಯ-ಬೆಳಕಿಗೆ ಎಂಟು ನಿಮಿಷ ಬೇಕು ಅಂದ್ರೆ ಅದು ಸುಮಾರು ಹದಿನೈದು ಕೋಟಿ ಕೀ.ಮೀ ನಿನಗೆ ನಡೆಯುತ್ತಾ ಬಂದರೆ ೪೦೦೦ ವರ್ಷಗಳೇ ಬೇಕಾಗಬಹುದು
ಪ್ರಶ್ನೆ-ನಿನ್ನ ಸೈಜ಼್ ಏನು?
ಸೂರ್ಯ- ೧೩೯೨೦೦೦(1392000) ಕಿ.ಮೀ ನಾನು ನಿಮ್ಮಮ್ಮ ಭೂಮಿಗಿಂತ ೧೦೩ ಪಟ್ಟು ದೊಡ್ಡವನು ನನ್ನನೋಳಗೆ ಸುಮಾರು ೧೩ ಲಕ್ಷ ಭೂಮಿಯ ಗಾತ್ರದ ವಸ್ತುಗಳನ್ನು ತುಂಬಬಹುದು

ಪ್ರಶ್ನೆ-ನಿನ್ನನ್ನು ಮುಟ್ಟಬಹುದಾ? ಅದ್ರೆ ಕೈ ಸುಡುತ್ತೆ?
ಸೂರ್ಯ- ನಾನೂ ಒಂದು ಪ್ರಶ್ನೆ ಕೇಳುತ್ತೇನೆ ನಿನ್ನ ಮೈ ತಾಪಮಾನ ಎಷ್ಟು ಗೋತ್ತಾ ಮಾನವನ ದೇಹದ ಸರಾಸರಿ ತಾಪ ತಿಳಿಸು ನೋಡೋಣ ?

ಸುಮಾರು ೩೬ ರಿಂದ ೩೭ ಡಿಗ್ರೀ (ತೋಂಭತ್ತೇಂಟು ಡಿಗ್ರೀ ಫ಼್ಯಾರನ್ ಹೀಟ್ ಅಂತ ನಮ್ಮ ಡಾಕ್ಟರ್ ಹೇಳುತ್ತಿದ್ದರು)
ಸೂರ್ಯ-ನನ್ನ ಮೈತಾಪ ಸುಮಾರು ೬೦೦೦ ಡಿಗ್ರೀ ಸೆಂಟಿಗ್ರೇಡ್ 

ಪ್ರಶ್ನೆ- ನಿನಗೆ ಜ್ವರ ಬಂದ್ರೆ ? ನೀನು ಇನ್ನೂ ಬಿಸಿಯಾಗಲ್ವಾ ನಮ್ಮ ಭೂಮಿಗೆ ಅವಾಗ ಬಿಸಿಲು ಇನ್ನೂ ಹೆಚ್ಚಾಗುತ್ತಾ? ಯಾವ ಡಾಕ್ಟರ್ ಹತ್ರ ಹೋಗ್ತೀಯಾ?
ಸೂರ್ಯ- ಸದ್ಯ ನನಗೆ ಏನೂ ಹಾಗೆ ಆಗಲ್ಲ ಅದರೆ ಕೆಲವು  ಬೆರೇ ತಾರೆಗಳು ತಮ್ಮ ಮೈತಾಪದಲ್ಲಿ ಬದಲಾವಣೆ ತೋರುತ್ತವೆ ನನಗೇನೂ ಹಾಗಾಗಲ್ಲ
ನನಗೆ ಜನ್ಮ ನೀಡಿದ್ದು ನನ್ನ ಆರೈಕೆ ಮಾಡೋದು ಒಬ್ಬರೆ ನಮ್ಮ ಅಮ್ಮ - ಪ್ರಕೃತಿ -ನೇಚರ್ ನನ್ನಲ್ಲಿ ಎನಾದ್ರೂ ಸ್ವಲ್ಪ ಬದಲಾವಣೆ ಕಂಡರೂ ನಿಮ್ಮ ವಿಜ್ಞಾನಿಗಳು ಹೆದರುತ್ತಾರೆ ಸದ್ಯಕ್ಕಂತೂ ಇನ್ನೂ ಹಲವು  ಕೋಟಿ ವರ್ಷ ನನ್ನ  ಅರೋಗ್ಯ ಚನ್ನಾಗಿರುತ್ತದೆ 
ಅದ್ರೆ ಭೂಮಿ ಬಿಸಿಯಗಬಹುದಾಗಿರೋದು ನನ್ನಿಂದ ಅಲ್ಲ ಅತಿಯಾದ ಪರಿಸರ ಮಾಲಿನ್ಯದಿಂದ ,ಪಾಪ ಆ ಭೂಮಿತಾಯಿಯನ್ನು  ಯಾಕೆ ಹಾಗೆ ಗೋಳು ಹೊಯ್ದುಕೊಳ್ಳುತ್ತೀರೋ ಏನೋ .
 ಮಾಲಿನ್ಯ,ಕಾಡುನಾಶ ನಿಲ್ಲಿಸದಿದ್ದರೆ ಆಗ ಬಿಸಿಲು ಹೆಚ್ಚಗುತ್ತದೆ ನಿಮಗೇ ಅಪಾಯ ನೋಡು.

ಪ್ರಶ್ನೆ-ನಿನಗೆ ಯಾವ ತಿಂಡಿ ತುಂಬಾ ಇಷ್ಟ 
ಸೂರ್ಯ- ನಾನು ತಿನ್ನೋದು ಹೈಡ್ರೋಜನ್ ಮಾತ್ರ  ಕೇವಲ ಅದರಿಂದಾನೆ ಬರೋ ಶಕ್ತಿಯಿಂದ ನಿಮ್ಮ ಭೂಮಿಯಲ್ಲಿ ಹಲವು ಸಸ್ಯಗಳು ಬೆಳೆಯುತ್ತವೆ ನಿಮಗೆಲ್ಲಾ ರುಚಿಯಾದ ಆಹಾರ ಲಭಿಸುತ್ತೆ 

ಪ್ರಶ್ನೆ-ದಿನಾ ಹೈಡ್ರೋಜನ್  ತಿನ್ನುತ್ತಾ ಕಾಲ ಕಳೆಯುತ್ತಿಯಲ್ಲಾ ಬೇಜಾರಾಗಲ್ವ
ಸೂರ್ಯ- ನೋ ಹಾಗೆ ಮಾಡೋದ್ರಿಂದ  ನನ್ನ ತೂಕ ಕಡಿಮೆಯಾಗುತ್ತೆ

ಪ್ರಶ್ನೆ- ನಾನಿವತ್ತು ಮೂರು ದೋಸೆ ತಿಂದೆ ನೀನು ಎಷ್ಟು ತಿನ್ನುತ್ತೀಯಾ
ಸೂರ್ಯ- ನನಗೆ ಸೆಕೆಂಡಿಗೇ ಸುಮಾರು ೪ ಲಕ್ಷ ಟನ್ ಹೈಡ್ರೋಜನ್ ಬೇಕು ನಾನು ಏನಂದರೂ ಸೌರ ವ್ಯವಸ್ಥೆಗೆ ದೊಡ್ಡವನಲ್ವಾ ಎಲ್ಲಾ ಗ್ರಹ ಕಾಯಗಳನ್ನು ತಿರುಗಿಸಬೇಕಲ್ಲಾ ನಿಮ್ಮ ಭೂಮಿಗೂ ಶಕ್ತಿ ಕೋಡಬೇಕಲ್ಲಾ ಹಾ! ಮಳೆಗಾಲ ಬಂತು ಭೂಮಿ ಹತ್ತಿರ ಬರುತ್ತಾಳೆ 
ನಿನಗೆ ಗೊತ್ತಾ ನಾ ಉತ್ಪತ್ತಿ ಮಾಡೋ ಶಕ್ತಿಯಲ್ಲಿ ಕೇವಲ ೦.೦೦೦,೦೦,೦೦೦೫ ರಷ್ಟು ಮಾತ್ರ ನಿಮ್ಮ ಭೂಮಿಗೆ ಸಾಕು

ಪ್ರಶ್ನೆ- ನಿನ್ನ ತೂಕ ಎಷ್ಟು 
ಸೂರ್ಯ- ತೂಕ ಅಲ್ಲ ದ್ರವ್ಯರಾಶಿ ಭೂಮಿಗಿಂತ  ೩೩೨೯೪೬ (332986) ಪಟ್ಟು ಅಧಿಕ 
ನಾನು ಸೌರವ್ಯೂಹದ  ಒಟ್ಟು ದ್ರವ್ಯರಾಶಿಯ  ೯೯.೯೮ (99.98)ರ ಭಾಗದಷ್ಟು ನಾನೇ ಇದ್ದೇನೆ ಉಳಿದ ಚೂರು ಪರು ತೂಕ ಮಾತ್ರ ನೀವೆಲ್ಲಾಭೂಮಿ, ಗ್ರಹ ಉಲ್ಕೆ, ಧೂಮಕೇತು  ಎಲ್ಲ ಇರುವಿರಿ 
ನಾನು ಕೆಲವು ದಿನಗಳಲ್ಲೇ ನಿಮ್ಮ ಭೂಮಿಯ ತೂಕಕ್ಕೆ ಸಮನಾದ ಹೈಡ್ರೋಜನ್ ತಿಂದು ಮುಗಿಸಿರುತ್ತೇನೆ

ಪ್ರಶ್ನೆ-ನಿನ್ನ ಮುಖದ ಮೇಲೆ ಏನದು  ಚುಕ್ಕೆಗಳು ,"ಪಿಂಪಲ್" ಆಗಿದೆಯಾ
ಸೂರ್ಯ-ಅವು ನನ್ನ ಮೇಲಿರೋ ಕಲೆಗಳು ಸನ್ ಸ್ಪಾಟ್ಸ್ ಅಂತ ನಿಮ್ಮ ವಿಜ್ಞಾನಿಗಳು ಕರೀತಾರೆ

ಪ್ರಶ್ನೆ-ಅದೇನು?
ಸೂರ್ಯ-ಆ ಕಲೆಗಳ ಬಳಿ ತಾಪಮಾನ ಬೇರೆಡೆಗಿಂತ ಸ್ವಲ್ಪ ಕಡಿಮೆ ಇರುತ್ತೆ, ಆದರೆ ಅಲ್ಲಿ ಗುರುತ್ವ ಹೆಚ್ಚಿರುತ್ತೆ ಹಾಗೆ  ಕಲೆಗಳು ಚಲಿಸೋದು ಸ್ಥಾನಾಂತರವಾಗೋದು ಎಲ್ಲಾ ಇದೆ.ಆ ಕಲಿಗಳು ಇರುವಲ್ಲಿ ಕಾಂತಕ್ಷೇತ್ರ ಪ್ರಬಲವಾಗಿರುತ್ತದೆ ಅದು ಭೂಮಿಗಿಂತ ಸುಮಾರು ೮೦೦೦ ಪಟ್ಟು ಹೆಚ್ಚು,ಅವು ಗುಂಪುಗೂಡುವುದೂ ಇದೆ ಅವು ಸುಮಾರು ೧೧ ವರ್ಷಗಳಿಗೊಮ್ಮೆ ನಿರಂತರವಾಗಿ  ಗುಂಪುಗೊಡುತ್ತವೆ, ಬದಲಾಗುತ್ತವೆ
ಅವು ಭೂಮಿಗಿಂತಲೂ ದೋಡ್ಡದಾಗಿರೋದೂ ಇದೆ.

ಪ್ರಶ್ನೆ- ಕಲೆಗಳಿರುವಲ್ಲಿ ತಾಪಮಾನ ಕಡಿಮೆಯಾ ಹಾಗದ್ರೆ ನಿನ್ನ ಶರೀರದೋಳಗೆ ತಾಪಮಾನ ಎಷ್ಟಿರಬಹುದು
ಸೂರ್ಯ- ಹೆದರಿಕೋಳ್ಳುವುದಿಲ್ಲಾ ಅಂದ್ರೆ ತಿಳಿಸುತ್ತೇನೆ ಅದನ್ನು ನೀನು ಕಲ್ಪನೇ ಮಾಡೋಕು ಆಗಲ್ಲ
ಅದು ಸುಮಾರು ಒಂದೂವರೆಯಿಂದ ಎರ‍ಡು ಕೋಟಿ ಡಿಗ್ರೀ ಕೆಲ್ವಿನ್
ಪ್ರಶ್ನೆ- ಅಬ್ಬಾ ಊಹಾತೀತವಾಗಿತ್ತು ನಿಜ ನಾನೇನೂ ಹೆದರಲ್ಲಾ ನಮ್ಮ ಸರ್ನ್’ನ ವಿಜ್ಞಾನಿಗಳು ಕಳೆದ ವರ್ಷ ಪಾರ್ಟಿಕಲ್ ಆಕ್ಸಿಲರೇಟರ್ ನಲ್ಲಿ ಇದಕ್ಕಿಂತಲೂ ಹೆಚ್ಚಿನ ತಾಪಮಾನ ಸೃಷ್ಟಿಸಿದ್ದರು ಆದರೆ ಅದು ನಿನ್ನಂತೆ ನಿರಂತರವಾಗಿರೋಕೆ ಸಾಧ್ಯಾನೇ ಇಲ್ಲ 
ಸೂರ್ಯ-ನಿಮ್ಮ ವಿಜ್ಞಾನಿಗಳು  ಬಿಡಪ್ಪಾ ಏನಾದ್ರೂ ಮಾಡ್ತಾರೆ ಸೌರಶಕ್ತಿಯಿಂದಾನೇ ನೀರು ಕಾಯಿಸೋದು, ವಿದ್ಯುತ್ ಪಡೆಯೋದು ಎಲ್ಲಾ ಮಾಡ್ತಾರೆ ಅದನ್ನು ಸರಿಯಾಗಿ ಉಪಯೋಗಿಸಬೇಕಷ್ಟೆ?

ಪ್ರಶ್ನೆ- ನಿನ್ನ ಬಗ್ಗೆ ಇನ್ನೂ ಸ್ವಲ್ಪ ಹೇಳುತ್ತೀಯಾ 
ಸೂರ್ಯ-ನನ್ನ ತಲೆ ಗುಂಗುರಾಗಿ ಕಾಣಿಸುತ್ತದಲ್ಲಾ ಅವು ಚಾಚಿಕೆಗಳು ಅವುಗಳಲ್ಲಿ ಕೆಲವು ನಿಮ್ಮ ಭೂಮಿಗಿಂತ ದೊಡ್ಡದಾಗಿವೆ ಅವು ಮೇಲಕ್ಕೆ ಚಿಮ್ಮಿ ಬೀಳುತ್ತಿರುತ್ತವೆ
(above photo downloaded from net)
ಸೂರ್ಯ- ನನ್ನೋಳಗೆ ಹಲವು ಪದರಗಳಿವೆ  ಅದರಲ್ಲಿ ಅತ್ಯಂತ ಒಳಗಿರೋದು ಗರ್ಭ(core) ಅದರ್ಲ್ಲೇ ಸುಮಾರು ಎರಡು ಕೋಟಿ ಡಿಗ್ರೀ ತಾಪವಿದೆ ಅದರ ನಂತರ ಪ್ರಭಾವಲಯ ಅದರಲ್ಲಿ ಹೈಡ್ರೋಜನ್ ಪರಮಾಣುಗಳು ಸೇರಿ ಹೀಲಿಯಮ್ ಆಗಿ ಶಕ್ತಿ ಬರುತ್ತದೆ
ನನ್ನ ಅತ್ಯಂತ ಹೊರಭಾಗ  ಕರ‍ೋನಾ(corona) ಅದು ಯಾವಾಗಲೋ ಕಾಣೋದೇ ಇಲ್ಲ ಅದನ್ನು ನೀವು ಸೂರ್ಯಗ್ರಹಣದ ಸಮಯದಲ್ಲಿ ಮಾತ್ರ ನೋಡಬಹುದು ಅದನ್ನು ಅಧ್ಯಯನ ಮಾಡೋದ್ರಿಂದ ನನ್ನ ಬಗ್ಗೆ ಹಲವು ವಿಷಯ ತಿಳಿಯಬಹುದು
(above -photo downloaded from net)
ಪ್ರಶ್ನೆ- ಮತ್ತೆ ಗ್ರಹಗಳು ಅವ್ರು ನಿನ್ನ ಫ಼್ರೆಂಡ್ಸಾ ಮತ್ತೆ ನಿನ್ನ ಸುತ್ತಾನೆ ಇರುತ್ತಾರೆ ಅವರು ನಿನಗೆ ಎಲ್ಲಿ ಸಿಕ್ಕಿದರು 
--ಸೂರ್ಯ--ಅವರು ನನ್ನ ಜೋತೆಗೇ ಹುಟ್ಟಿದವರು ನನ್ನ ಸುತ್ತಾ ಇದ್ದ ಹಲವಾರು ವಸ್ತುಗಳು ಢಿಕ್ಕಿ ಹೊಡೆದು ಒಂದಾಗಿ ಕೋನೆಗೆ ಒಂದು ನಿಯಮಿತ ಆಕಾರ ಕಾಯಗಳಾದವು ಈಗಲೂ ನಿಯಮಿತ ಅಕಾರವಿಲ್ಲದವು ಹಲವು ಇವೆ
ಅದರಲ್ಲಿ ನಿಮ್ಮ ಭೂಮಿ ನನ್ಗೆ ತುಂಬಾ ಇಷ್ಟ ಭೂಮಿ ತುಂಬಾ ದೂರದಲ್ಲೋ ಇಲ್ಲ ಹತಿರದಲ್ಲೂ ಇಲ್ಲ  ಆದರಿಂದ ಭೂಮಿಗ ಒಂದು ನಿಯಮಿತ ಪ್ರಮಾಣದ ಶಕ್ತಿ ನನ್ನಿಂದ ಸಿಗುತ್ತದೆ ಆದ್ದರಿಂದ  ನಿಮ್ಮ ಭೂಮಿಯ ಮೇಲೆ ಜೀವಿಗಳಿವೆ

ಪ್ರಶ್ನೆ:-ಏನಿದು ಇಷ್ಟೊಂದು ಬಿಸಿಲು ಅದೂ ಈ ಶಿವಮೊಗ್ಗದಲ್ಲಿ? ಹೊರಗೆ ಬರೋಕಾಗಲ್ಲ,ನನ್ನ ಅಕ್ವೇರಿಯಮ್ ನಲ್ಲಿ ಒಂದೇ ವಾರಕ್ಕೆ ನೀರು ಎರಡು ಸೆಂಟೀಮೀಟರ್ ಕಡಿಮೆಯಾಗಿದೆ.  ಮೊದಲು ನಾಡೆಲ್ಲಾ ತುಂಬಾ ತಂಪಾಗಿತ್ತು ಕೆಲವು ವರ್ಷಗಳಿಂದ ಝಳ ಹೇಗಿದೆ ನೋಡು?ಇನ್ನು ಉತ್ತರ ಕರ್ನಾಟಕ ಹೇಗೋ ಏನೋ? ವಿದ್ಯುತ್ ಸಮಸ್ಯೆ  ಬೇರೆ ಇದಕ್ಕೆಲ್ಲಾ ನೀನೇ ಕಾರಣ ಅಲ್ವಾ ಅದಕ್ಕೆ ನಿನ್ನ ತಾಪ ಕಡಿಮೆ ಮಾಡೋಕಾಗಲ್ವಾ?

ಸೂರ್ಯ:=ಅದು ನನ್ನ ಬಿಸಿಲಿನಿಂದ ಏನೋ ಸರಿ ಆದರೆ ಅದಕ್ಕೆ ಬಿಸಿಲೊಂದೇ ಕಾರಣವಲ್ಲ ಬಿಸಿಲಿನಿಂದಾನೇ ನೀರು ಆವಿಯಾಗಿ ಮೋಡವಾಗಿ ಮಳೆ ಬರೋದು ಅಂತಾ ನಿಮಗೆ ಗೋತ್ತೇ ಇದೆಯಲ್ಲಾ.ನನ್ನ ತಾಪ ಕಡಿಮೆಯಾಗ ಬೇಕೆಂದರೆ ಮರಗಳನ್ನು ಕಡಿಯಬಾರದು,ಪ್ರತಿಯೊಬ್ಬರೂ ಹೆಚ್ಚು ಮರ ಬೆಳೆಸಬೇಕು, ಹಸಿರು ಮನೆ ಪರಿಣಾಮ ಉಂಟಾಗದಂತೆ ತಡೆಯಬೇಕು ಅದಕ್ಕೆ ವಾಯು ಮಾಲಿನ್ಯ  ಕಡಿಮೆ ಮಾಡಬೇಕು ವಾಹನಗಳ ಸಂಖ್ಯೆ ಕಡಿಮೇ ಮಾಡಬೇಕು ಎದೆಲ್ಲಾ ಸಾಧ್ಯವಾಗಬೇಕೆಂದರೆ ಜನಸಂಖ್ಯೆ ನಿಯಂತ್ರಣದಲ್ಲಿರಬೇಕು,
ಅಷ್ಟೇ ಅಲ್ಲ ಸೌರ ಉಪಕರಣಗಳನ್ನು ಬಳಸಬೇಕು ವಿದ್ಯುತ್ ಉಳಿಸಬೇಕು  .
--ಹೌದು ಇದರಿಂದ ರಾಯಚೂರಿನ ಶಾಖೋತ್ಪನ್ನ-ವಿದ್ಯುತ್-ಸ್ಥಾವರದ ಹೊರೆ ಕಡಿಮೆಯಾಗುತ್ತೆ ಇದರಿಂದ ಕಡಿಮೆ ಕಲ್ಲಿದ್ದಲು ಉರಿಯೋದ್ರಿಂದ ವಾಯು ಮಾಲಿನ್ಯ ಕಡಿಮೆಯಾಗುತ್ತೆ ನಮ್ಮ ಮನೆಯಲ್ಲಿ "CFL ,TUBE LIGHT" ಇದೆ ಇದರಿಂದಾನು ವಿದ್ಯುತ್ ಉಳಿಯುತ್ತೆ ಅಲ್ವಾ 

ಸೂರ್ಯ:= ನಿಮ್ಮ ವಿಜ್ಞಾನಿಗಳು  ಇತ್ತೀಚಿಗೆ ಕಂಡುಹಿಡಿದಿರುವಂತೆ ಮನೆಯ ಮೇಲೆ ಬಿಳಿ ಬಣ್ಣ ಬಳಿಯುವುದರಿಂದಾನೂ ಬೆಳಕು ಹೆಚ್ಚು ಪ್ರತಿಫಲಿಸಿ ಭೂಮಿಯ ಶಾಖ ಕಡಿಮೆಯಾಗಬಲ್ಲದು.
ಎ.ಸಿ , ಫ಼್ರಿಜ್ ,ಹಾಗು ಕೀಟನಾಶಕಗಳ ಮೇಲೆ ಓಜ಼ೋನ್-ಮಿತ್ರ(OZONE FRIENDLY) ಲೋಗೋ ಇರುವುದನ್ನು ಖಚಿತಪಡಿಸಿ ಖರೀದಿಸಿ
ಪ್ರಶ್ನೆ :=ನಾವು ಭಾರತದವರು ಎಷ್ಟೋ ಪರವಾಯಿಲ್ಲ ಇಡೀ ಭಾರತ ದೇಶ ಒಂದು ತಿಂಗಳು ಬಳಸುವಷ್ಟು ಪೆಟ್ರೋಲಿಯಂ ಅನ್ನು ಕ್ಯಾಲಿಫ಼ೋರ್ನಿಯಾ ರಾಜ್ಯ-ಒಂದರಲ್ಲೇ ಎರಡು ದಿನದಲ್ಲಿ ಖಾಲಿ ಮಾಡುತ್ತಾರೆ
ಹೆಚ್ಚು ಅರಣ್ಯ ಹೊಂದಿರುವ ರಾಷ್ಟ್ರಗಳಲ್ಲಿ ಭಾರತ ಹತ್ತನೇ ಸ್ಥಾನದಲ್ಲಿದೆ ಅದೂ ಇಷ್ಟು ಜನಸಂಖ್ಯೆ ಇದ್ದೂ ಸಹ. ಆದರೆ ನೀರಿನ ಅವಶ್ಯಕತೆಯಲ್ಲಿ ನಾವೇ ನಂಬರ್-ವನ್ 

ಸೂರ್ಯ:=ಹೌದು ಮೊನ್ನೆ ಕೋಪನ್-ಹೇಗನ್ ಸಮಾವೇಶದಿಂದ "ಪ್ರಧಾನಿ" ತಿರಸ್ಕರಿಸಿ -ಎದ್ದು ಬಂದರಲ್ವಾ .ಆದರೆ ಎಲ್ಲ ದೇಶದವರೂ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಆಗ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತೆ
ನಿಮ್ಮ ಮಿತಿಯಲ್ಲಿ ಎನೇನು ಒಳ್ಳೆ ಕಾರಯ ಸಾಧ್ಯಾನೋ ಅದನ್ನೆಲ್ಲಾ ಸಾಧ್ಯವಾಗಿಸಿ ನಿಮ್ಮ ಭೂಮಿಯನ್ನು ಚನ್ನಾಗಿ ನೋಡಿಕೊಂಡರೆಭೂಮಿ ನಿಮ್ಮನು ನನ್ನ ಬಿಸಿಲಿನಿಂದ ಮಾತ್ರವಲ್ಲ ಎಲ್ಲಾ ಸಮಸ್ಯೆಗಳಿಂದಲೂ ರಕ್ಷಿಸುತ್ತಾಳೆ 
ಪ್ಲಾಸ್ಟಿಕ್ ಕಡಿಮೆ ಮಾಡಿ ,ಮಳೆನೀರು ಸಂಗ್ರಹಿಸಿ ಅಗ ಬಿಸಿಲಿನ ಝಳದ ಸಮಸ್ಯೆಗಳಿಂದ ಪಾರಾಗಬಹುದು

ಮಳೆಗಾಲದ ಬಿಸಿಲು-ಮಳೆಯಲ್ಲಿ ಕಾಮನ-ಬಿಲ್ಲಿನೊಂದಿಗೆ ಸಿಗೋಣ 

ಸರಿ ಮತ್ತೋಮ್ಮೆ ಸಿಗೋಣ ಬೈ
ನಾನೇನು ಸದಾ ಇಲ್ಲೇ ಇರುತ್ತೇನೆ ಹೀಗೆ ನನ್ನ ಪ್ರಪಂಚದ ಎಲ್ಲರಿಗೂ ಸದಾ ಕಾಣಿಸುತ್ತೇನೆ 

ಏಳೋ ಬೆಳಗಾಯ್ತು ,ಏಳೋ ಬೆಳಗಾಯ್ತು,
ಓ ಅಮ್ಮಾ  ಸೂರ್ಯ ಎಲ್ಲಿ?
ಅಮ್ಮ :=ಅಲ್ಲಿ ಪೂರ್ವದಲ್ಲಿ ಮೋಡಗಳ ಮರೆಯ ಮುಸುಕನ್ನು ಸರಿಸಿ ಬರುತ್ತಿದ್ದಾನೆ ,
ಗುಡ್ ಮಾರ್ನಿಂಗ್ 
ಈ ದಿನ ಬಿಸಿಲಿನ್ ಝಳ ಕಡಿಮೆ ಇರಲಿ ಎಂದು ಹಾರೈಸುತ್ತಿದ್ದೇನೆ?
ಈ ದಿನ ಪೂರ್ತಿ ಸಂತಸವಾಗಿರಲಿ

(ತಪ್ಪಿದ್ದರೆ ದಯವಿಟ್ಟು ತಿಳಿಸಿ-ಅದರೆ !!!ನನಗೆ!!! ಸೂರ್ಯನಿಗಲ್ಲ!!!!!!)