ಗ್ರಹಣದ ಕನ್ನಡಕ ಅಗಲಿ, ವೆಲ್ಡಿಂಗ್ ಗಾಜು ಆಗಲಿ , ಇವು ಸೂರ್ಯನ ಬೆಳಕನ್ನು ನೇರವಾಗಿ ನೋಡುವ ತಂತ್ರಗಳಾಗಿದ್ದರಿಂದ ಇವು ಶೇಕಡಾ ೯೦ ರವರೆಗೆ ಮಾತ್ರ ಸುರಕ್ಷಿತ ಎನ್ನಬಹುದು
ಇನ್ನು ಈ ಸಂಚಿಕೆಯಲ್ಲಿ ಪೂರ್ಣ ಸುರಕ್ಷಿತವಾದ ತಂತ್ರಗಳ ಬಗ್ಗೆ ತಿಳಿಸುತ್ತೇನೆ
ಇದರಲ್ಲಿ ಸೂರ್ಯನ ಬಿಂಬವನ್ನು ಮಾತ್ರ ನೋಡುತ್ತೇವೆ ಇದರಲ್ಲಿ ಸೂರ್ಯನ ಬೆಳಕು ಯಾವುದೇ ರೀತಿಯಲ್ಲಿ ನಮ್ಮ ಕಣ್ಣನ್ನು ನೇರವಾಗಿ ಪ್ರವೇಶಿಸುವುದಿಲ್ಲ ಇವು ಮೊದಲ ವಿಧಾನಗಳಿಗಿಂತ ಹೆಚ್ಚು ಸುರಕ್ಷಿತ
೧)ಹಂಚಿಮನೆಯ ಹಂಚಿನಲ್ಲಿಸಣ್ಣ ರಂಧ್ರವಿದ್ದರೆ ಅದು ಸೂಜಿ-ಬಿಂಬ-ಗ್ರಾಹಕದಂತೆ ಕೆಲಸ ಮಾಡುತ್ತದೆ ಆ ರಂಧ್ರದ ಮೂಲಕ ಬರುವ ಬೆಳಕಿನಿಂದ ಸೂರ್ಯನ ಬಿಂಬ ಮೂಡಿರುತ್ತದೆ ಆ ಬಿಂಬವನ್ನು ಮಾತ್ರ ವೀಕ್ಷಿಸಿ
೨)ಇದನ್ನು ನಾವು ಸಹ ಪರಿಣಾಮಕಾರಿಯಾಗಿ ಮಾಡಬಹುದು ಅದು ಸೋಲಾರ್-ರಿಫ಼್ಲೆಕ್ಟರ್ ಸಹಾಯದಿಂದ
ಅದನ್ನು ತಯಾರಿಸುವುದನ್ನು ತಿಳಿಯಿರಿ
ಒಂದು ನಿರುಪಯುಕ್ತ ಪ್ಲಾಸ್ಟಿಕ್-ಬಾಲ್ ತೆಗೆದುಕೊಳ್ಳಿ ಅದಕ್ಕೆ ಒಂದು ಸಣ್ಣ ಕನ್ನಡಿಯನ್ನು(ಸುಮಾರು ೧೦ಮೀಮೀ ಗಾತ್ರದ್ದು ಅದನ್ನು ವಸ್ತ್ರವಿನ್ಯಾಸದಲ್ಲಿ ಹೆಚ್ಚಾಗಿ ಬಳಸುತ್ತಾರೆ) ಸೆಲ್ಲೋ ಟೇಪ್ ಸಹಾಯದಿಂದ ಅಂಟಿಸಿ
ಇದನ್ನು ಒಂದು ಸಿಲಿಂಡರ್ ಗಾತ್ರದ ವಸ್ತುವಿನ ಮೇಲೆ ಇರಿಸಿ
ಈಗ ಬಾಲ್ ಅನ್ನು ಬೇಕಾದಂತೆ ತಿರುಗಿಸಬಹುದು ಇದರ ಸಹಾಯದಿಂದ ಸೂರ್ಯನ ಬಿಂಬವನ್ನು ದೂರದಲ್ಲಿ ಮೂಡಿಸಿ ನೋಡಿ
೩)ದೂರದರ್ಶಕದ ಸಹಾಯದಿಂದ ಸೂರ್ಯನ ಬಿಂಬ ಪಡೆಯಬಹುದು
ದೂರದರ್ಶಕದ ಸಹಾಯದಿಂದ ಸೂರ್ಯನನ್ನು ವೀಕ್ಷಿಸಬೇಕೆಂದಿರುವವರಿಗೆ,ದೂರದರ್ಶಕ ಹೊಂದಿರುವವರಿಗೆ ಕೆಲವು ಸಲಹೆಗಳನ್ನು ಮುಂದಿನ ಸಂಚಿಕೆಯಲ್ಲಿ ನೀಡಲಾಗಿದೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ