ಶುಕ್ರವಾರ, ಜನವರಿ 15, 2010

ಸೂರ್ಯಗ್ರಹಣ

ಎಲ್ಲರಿಗೂ  ನಮಸ್ಕಾರ ಇದು ನನ್ನ ಉಪ-ಬ್ಲಾಗ್

ಇದರಲ್ಲಿ ಖಗೋಳ ವಿಜ್ಞಾನದ ಸಕಾಲಿಕ ವಿಷಯಗಳ ಬಗ್ಗೆ ಚರ್ಚಿಸುತ್ತೇನೆ

ಇದರ ಲೇಖನಗಳು ತಾತ್ಕಾಲಿಕವಾಗಿ ಮಾತ್ರ ಲಭ್ಯವಿರಬಹುದು ಅಥವಾ ಇದು ಕೆಲಕಾಲ ಮಾತ್ರ ಅಸ್ತಿತ್ವದಲ್ಲಿರಬಹುದು ,"ಪ್ರತಿಫಲನ" ದಷ್ಟು ಇದನ್ನೂ ಗಮನ ಹರಿಸುತ್ತೀರ ಎಂದುಕೊಂಡಿದ್ದೇನೆ

ಈಗ ಸದ್ಯ ಸೂರ್ಯಗ್ರಹಣದ ಬಗೆಗಿನ ಚರ್ಚೆಗಾಗಿ ಮೀಸಲಿದೆ
ನಿಮಗೆಲ್ಲಾ ತಿಳಿದಿರುವಂತೆ ಈ ಬಾರಿ ದೀರ್ಘಕಾಲದ ಸಂಕ್ರಮಣ ಸೂರ್ಯಗ್ರಹಣ ಸಂಭವಿಸಲಿದೆ
ಈ ಸೂರ್ಯ-ಚಂದ್ರರ  ನೆರಳು-ಬೆಳಕಿನಾಟವನ್ನು ವಿಜ್ಞಾನದ ಎಚ್ಚರಿಕೆಯಲ್ಲಿ ಸುರಕ್ಷಿತವಾಗಿ ನೋಡಿ ಆನಂದಿಸಬಹುದು 

ನಾನು ಇದುವರೆಗೂ ಮೂರು ಸೂರ್ಯಗ್ರಹಣಗಳನ್ನೂ ಹಾಗು ಒಮ್ಮೆ ಬುಧ-ಸಂಕ್ರಮಣವನ್ನೂ, ಒಮ್ಮೆ ಶುಕ್ರ-ಸಂಕ್ರಮಣವನ್ನೂ ವೀಕ್ಷಿಸಿದ್ದೇನೆ (ಚಂದ್ರಗ್ರಹಣ ಮಾತ್ರ ಒಂದೂ ಇಲ್ಲ)

ಸೂರ್ಯಗ್ರಹಣ ವೀಕ್ಷಿಸಲು  ಸಿದ್ಧರಾಗುವ ಮೋದಲು ಕೆಲವು ವಿಚಾರಗಳಲ್ಲಿ ಎಚ್ಚರದಿಂದಿದ್ದರೆ ಸೂರ್ಯಗ್ರಹಣವನ್ನು ಸೂಕ್ತವಾಗಿ ನೋಡಿ ಆನಂದಿಸಬಹುದು

ಅದು ಸರಿ ಅಸುರಕ್ಷಿತ ಸೂರ್ಯಗ್ರಹಣ ವೀಕ್ಷಣೆ ಇಷ್ಟೋಂದು ಅಪಾಯಕಾರಿಯೇ ಅದು ಏಕೆ

೧) ಮೋದಲನೆಯದಾಗಿ ಸೂರ್ಯನನ್ನು ಗ್ರಹಣದ ಸಮಯದಲ್ಲಿ ಮಾತ್ರವಲ್ಲ ಗ್ರಹಣವಿಲ್ಲದಾಗಲೂ ನೇರವಾಗಿ ದಿಟ್ಟಿಸಲೇಬಾರದು
೨) ನೀವು ಗಮನಿಸಿರಬಹುದು ಹೊರಗೆ ಬಿಸಿಲಿನಲ್ಲಿ ತಿರುಗಾಡಿ ಮನೆಯೋಳಗೆ ಪ್ರವೇಶಿಸಿದಾಗ ತಟ್ಟನೆ ಮನೇಯೋಳಗಿನ ವಸ್ತುಗಳು ಕಾಣುವುದಿಲ್ಲ ಅದಕ್ಕೆ ಕಾರಣ ನಮ್ಮ ಕಣ್ಣಿನ ವಪೆ ಅದು ಬೆಳಕಿನ ತೀವ್ರತೆಗನುಸಾರವಾಗಿ ತನ್ನ ಗಾತ್ರವನ್ನು ಬದಲಿಸುತ್ತಾ ಅವಶ್ಯಕ ಬೆಳಕನ್ನು ಮಾತ್ರ ಕಣ್ಣಿನೋಳಗೆ ಬಿಡುತ್ತದೆ ಆದರೆ  ನೆನಪಿರಲಿ ಅದರ ಚಲನೆ ತುಂಬಾ ನಿಧಾನ ಹಾಗು ಅದು ಅನ್ನೈಛ್ಛಿಕ ಕ್ರಿಯೆಯಾಗಿದ್ದು ಅದನ್ನು ನಾವು ನಮ್ಮ ಇಚ್ಚಾನುಸಾರ ನಿಯಂತ್ರಿಸಲು ಬರುವುದಿಲ್ಲ(ಹೇಗೆ ಹೃದಯದ ಬಡಿತದ ವೇಗ ನಮ್ಮಿಚ್ಚೆಯಂತೆ ಹೆಚ್ಚು-ಕಡಿಮೆ ಮಾಡಲು ಸಾಧ್ಯವಿಲ್ಲವೋ ಹಾಗೆ)

ಸೂರ್ಯಗ್ರಹಣಕಾಲದಲ್ಲಿ ಸೂರ್ಯನೇನೋ ಮರೆಯಾಗಿರುವುದೇ ಆದರೆ ಆಗ ನಮ್ಮ  ಕಣ್ಣಿನ ವಪೆ ಹಿಗ್ಗಿರುತ್ತದೆ  ಗ್ರಹಣ ಹಟಾತ್ತಾಗಿ ಬಿಡುವಾಗ ಒಮ್ಮೆಗೆ ಬೆಳಕಿನ ತೀವ್ರತೆ ಹೆಚ್ಚುವುದರಿಂದ ಆ ಸನ್ನಿವೇಶ ಎದುರಿಸಲು ವಪೆ ಸಿದ್ಧವಾಗಿರುವುದಿಲ್ಲ ಆಗ ನಮ್ಮ ಕಣ್ಣಿಗೆ ಕೇವಲ ಸಾಮನ್ಯ ಬೆಳಕಿನಿಂದಲೇ ಹಾನಿಯಾಗಬಹುದು
( ಒಮ್ಮೊಮ್ಮೆ ಮಧ್ಯರಾತ್ರಿ ಎದ್ದಾಗ ಒಮ್ಮೆಗೆ ಲೈಟ್ ಆನ್ ಮಾಡಿದಾಗ ಕಣ್ಣಿಗೆನೋವಾಗುವುದನ್ನು ಗಮನಿಸಿರಬಹುದು- ಮೊಬೈಲ್ ಸ್ಕ್ರೀನ್ ನೋಡಿದಾಗಲೂ ಹೀಗಾಗುತ್ತದೆ ಮಲಗುವಾಗ ಮೊಬೈಲ್ ಹತ್ತಿರದಲ್ಲಿಡಬೇಡಿ)
ಇಷ್ಟು ಹಾನಿ ಸಾಮಾನ್ಯ ಬೆಳಕಿನಿಂದಲೇ ಆಗುತ್ತದೆ , 


೩)ಇನ್ನು ಕೇಳಿ ಅಲ್ಟ್ರಾ-ವಯೋಲೆಟ್ ಹಾಗು ಇತರೆ ಕಿರ‍ಣಗಳ ಅಪಾಯವನ್ನು
ಕೆಲವು ತರಂಗಾತರದ ಅಲ್ಟ್ರಾ-ವಯೋಲೆಟ್ ಕಿರಣಗಳು ಕಣ್ಣಿನ ರೆಟಿನಾವನ್ನು ಹಾನಿಗೋಳಿಸುವಷ್ಟು ಶಕ್ತಿಶಾಲಿಯಾಗಿರುತ್ತವೆ ಆದ್ದರಿಂದ ಸೂರ್ಯನನ್ನು ವೀಕ್ಷಿಸುವಾಗ ಈ ಕಿರಣಗಳಿಂದ ಮುಕ್ತರಾಗಿರುವುದು ಅವಶ್ಯಕ
೪)ಆ ನಂತರದ ಕಿರಣಗಳಾದ ,X-rays  ಹಾಗು ಗಾಮ ಕಿರಣಗಳೂ ಸಹ ಅಪಾಯಕಾರಿಯೇ ಆದರೆ ಇವ್ಯಾವುವೂ ಭೂ ವಾತಾವಣವನ್ನು ಭೇದಿಸಿ ನೆಲದ ವರೆಗೆ ಬರುವ  ಸಾಹಸವನ್ನು ಮಾಡುವುದಿಲ್ಲ : ದುರದೃಷ್ಟವಶಾತ್ ಬಂದರೆ? ಅದಕ್ಕೆ ಹುಷಾರಾಗಿರಬೇಕು
೪)ಇನ್ನು ಕಾಸ್ಮಿಕ್-ಕಿರಣಗಳ ಬಗ್ಗೆ  ಮಾನವನಿಗೆ ಇದುವರೆಗೂ ಪೂರ್ಣವಾಗಿ ಗೊತ್ತಿಲ್ಲ ಅದು ವಿಪರೀತ ಅಪಾಯಕಾರಿಯಗಿರುವುದರಿಂದ ಅದರ ಬಗ್ಗೆಯೂ ಎಚ್ಚರ ಅಗತ್ಯ

೫)ಇದರಲ್ಲಿ ಅಲ್ಟ್ರಾ-ವಯೋಲೆಟ್ ಕಿರಣಗಳ ಅಪಾಯದ ಸಾಧ್ಯತೆಗಳೇ ಹೆಚ್ಚು ಅದನ್ನು ನಿವಾರಿಸಿಕೋಂಡರೆ ನಮ್ಮ ಗ್ರಹಣ ವೀಕ್ಷಣೆ  ಬಹುತೇಕ ಸುರಕ್ಷಿತವಾಗಿರುವುದು

ಸರಿ ಮುಂದಿನ ಸಂಚಿಕೆಯಲ್ಲಿ ಸುರಕ್ಷಿತ ಗ್ರಹಣ-ವೀಕ್ಷಣಾ ವಿಧಾನಗಳ ಬಗ್ಗೆ ತಿಳಿಸುತ್ತೇನೆ
-ಹೋಸ ವರ್ಷದ ಶುಭಾಶಯಗಳು

ಕಾಮೆಂಟ್‌ಗಳಿಲ್ಲ: