ಶನಿವಾರ, ನವೆಂಬರ್ 6, 2010

ಬೆಳಕಿನ ವೇಗವನ್ನು ಮೀರಲು ಏಕೆ ಸಾದ್ಯವಿಲ್ಲ?

ಬೆಳಕಿನ ವೇಗವನ್ನು ಮೀರಲು ಏಕೆ ಸಾದ್ಯವಿಲ್ಲ?



ಬೆಳಕಿನ ವೇಗವನ್ನು ಮೀರಲು ಸಾದ್ಯವಿಲ್ಲ
ಇದನ್ನು ಐನ್ ಸ್ಟೀನ್ ತಮ್ಮ velocity addition theorem ನಲ್ಲಿ ತೋರಿಸಿಕೊಟ್ಟಿದ್ದಾರೆ
ಅದರಂತೆ ಹಾಗೇನಾದರೂ ಯಾರಾದರೂ ಬೆಳಕಿನ ವೇಗವನ್ನು ಮೀರಿ ಪ್ರಯಾಣಿಸಿದರೆ(+v)
ಅವರು ಭೂತಕಾಲಕ್ಕೆ ಪ್ರಯಾಣಿಸುತ್ತಾರೆ
ಹಾಗೆಯೇ ಋಣಾತ್ಮಕ ಬೆಳಕಿನವೇಗದಲ್ಲಿ ಪ್ರಯಾಣಿಸಿದರೆ ಭವಿಶ್ಯತ್ ಕಾಲವನ್ನು ತಲುಪುತ್ತಾರೆ(-v)

ಹೇಗೆ ಋಣಾತ್ಮಕ ಉದ್ದದ ಗೆರೆ ಎಳೆಯಲು ಸಿದ್ಧವಿಲ್ಲವೋ ಹಾಗೇ ಋಣಾತ್ಮಕ ಬೆಳಕಿನವೇಗವನ್ನು ಕಲ್ಪಿಸಲೂ ಸಾದ್ಯವಿಲ್ಲ ಹಾಗೇ ಭವಿಷ್ಯವನ್ನೊ ಕಲ್ಪಿಸಲೂ ಸಾಧ್ಯವಿಲ್ಲ

ಇದರ ಬಗ್ಗೆ ಕ್ರಮೇಣ ವಿವರವಾಗಿ ತಿಳಿಸುವ ಪ್ರಯತ್ನ ಮಾಡುತ್ತೇನೆ

3 ಕಾಮೆಂಟ್‌ಗಳು:

ಮಹೇಶ ಭಟ್ಟ ಹೇಳಿದರು...

ಭೂತ ಭವಿಷ್ಯಕ್ಕೂ ಬೆಳಕಿನ ವೇಗಕ್ಕೂ ಒಂದಕ್ಕೊಂದು ಸಂಬಂಧ. ಇದು ನಿಜವಾಗಿಯೂ ಹೌದೇ

ತೇಜಸ್ವಿನಿ ಹೆಗಡೆ ಹೇಳಿದರು...

ದರ್ಶನ್ ಅವರೆ,

ತುಂಬಾ ಚೆನ್ನಾಗಿದೆ ನಿಮ್ಮ ಪ್ರತಿಫಲನ ಹಾಗೂ ಗ್ರಹಣ. ಕನ್ನಡದಲ್ಲಿ ಇಂತಹ ಬರಹಗಳ ಅತ್ಯವಶ್ಯಕತೆ ಇದೆ. ಭೂತಕಾಲ ಹಾಗೂ ಭವಿಷ್ಯತ್ಕಾಲವನ್ನು ಹೊಕ್ಕಿ ನೋಡಬಲ್ಲ ಕೆಲವೇ ಕೆಲವು ಬೆರಳಣಿಕೆಯ ಮಹಾನ್ ವ್ಯಕ್ತಿಗಳು ಬದುಕಿದ್ದರು ಹಿಂದೆ (ಶಂಕರಾಚಾರ್ಯರು, ರಾಮಕೃಷ್ಣ ಪರಮಹಂಸರು ಇತ್ಯಾದಿ) ಅವರೆಲ್ಲಾ ಈ ವಾದವನ್ನು ಮೀರಿ ಹೊಕ್ಕಿರಬಹುದೇ ಇಲ್ಲಾ ಈ ಸಿದ್ಧಿ ಅವರಿಗೆ ಸಿದ್ಧಿಸಿತ್ತೇ? ವಿಜ್ಞಾನ ಮನುಷ್ಯನ ಅರಿವಿಗೆ ಬರುವಂಥದ್ದು. ಆದರೆ ವಿಜ್ಞಾನವನ್ನೂ ಮೀರಿದ್ದ ಅದೆಷ್ಟೋ ಸಂಗತಿಗಳು ಇನ್ನೂ ಅಸ್ತಿತ್ವದಲ್ಲಿದೆ ಅನ್ನಿಸುತ್ತದೆ. ಇನ್ನು ನೀವು ಸೂರ್ಯಗ್ರಹಣದಲ್ಲಿ ಮಕ್ಕಳಿಗೆ ರಜೆ ಕೊಡುವುದರ ಬಗ್ಗೆ ಹೇಳಿದ್ದಿರಿ. ಅದನ್ನು ಮೂಢನಂಬಿಕೆ ಎನ್ನಲೂ ಬಹುದು. ಆದರೆ ಹಾಗೆ ಮಾಡದಿದ್ದರೆ ಕುತೂಹಲದಿಂದಲೋ ಇಲ್ಲಾ ಉಡಾಫೆಯಿಂದಲೋ ಮಕ್ಕಳು ಸೂರ್ಯನನ್ನು ಬರಿಗಣ್ಣಿನಿಂದಲೇ ನೋಡಿ ಕುರುಡುತನಕ್ಕೀಡಾಗುವ ಅಪಾಯವೂ ಇರುವುದಲ್ಲವೇ? ಆ ಜವಾಬ್ದಾರಿ ಬೇಡವೆಂದೋ ಇಲ್ಲಾ ಮಕ್ಕಳ ಹಿತದೃಷ್ಟಿಯಿಂದಲೋ ಹೀಗೆ ಮಾಡಿರಬಹುದು. ಆದರೆ ಗ್ರಹಣ ಕಾಲದಲ್ಲಿರುವ ಕೆಲವೊಂದು ಮೂಢನಂಬಿಕೆಗಳಿಗೆ ನನ್ನದೂ ವಿರೋಧವಿದೆ.

ಉತ್ತಮ ಬ್ಲಾಗಿಂಗ್. ಬರುತ್ತಿರುವೆ.. ಬರೆಯುತ್ತಿರಿ.

ದರ್ಶನ ಹೇಳಿದರು...

@Mahesh Bhat
ಭೂತ ಭವಿಷ್ಯಗಳು ವಿಶ್ವ ,ಆಯಾಮಗಳು ಬೆಳಕಿನ ವೇಗದೊಂದಿಗೆ ಬದಲಾಗುತ್ತವೆ ಎಂದರೆ ಯಾರಿಗೂ
ತತ್ ಕ್ಷಣಕ್ಕೆ ನಂಬಲಾಗದು ಆದರೂ ವಿಜ್ಞಾನದ ಸಿದ್ಧಾಂತಗಳು ಹೀಗೆ ಇವೆ
ಅವು ಸದಾ ಪೂರ್ಣ ಒಮ್ಮತಕ್ಕೆ ಬರದಂತೇ ಇವೆ ಎಂಬುವುದೂ ಅಷ್ಟೇ ಸತ್ಯ

@ ತೇಜಸ್ವಿನಿ ಅಕ್ಕಾ

ಭವಿಷ್ಯ ಹೀಗೇ ಎಂದು ಎಲ್ಲರಿಗೂ ತಿಳಿದರೆ ನಮ್ಮ ನಿತ್ಯಜೀವನದಲ್ಲಿ ಸಂತಸವೇ ಇರುವುದಿಲ್ಲ ಅಲ್ಲವೆ ,
ತಮ್ಮ ಸಲಹೆಗಳಿಗೆ ಧನ್ಯವಾದಗಳು
ಇನ್ನು ಮುಂದೆ ಪ್ರಾಚೀನ ಭಾರತದಲ್ಲಿನ ವಿಜ್ಞಾನದ ಬಗ್ಗೆಯೂ ತಿಳಿಸುವ ಪ್ರಯತ್ನ ಮಾಡುತ್ತೇನೆ
ಆದರೆ ನನಗೆ ಲಭ್ಯವಿರುವ ಮಾಹಿತಿ ತುಂಬಾ ಕಡಿಮೆ ,ಆದರೂ ಪ್ರಯತ್ನಿಸುತ್ತೇನೆ ನಿಮ್ಮ-ಅಭಿಪ್ರಾಯ ತರ್ಕಿಸುವಂತಿದೆ
ಧನ್ಯವಾದಗಳು

ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದಗಳು