ಸೋಮವಾರ, ಡಿಸೆಂಬರ್ 13, 2010

ಬೆಳಕಿನ ವೇಗದಲ್ಲಿ ಚಲಿಸಿದರೆ ಏನಾಗಬಹುದು?

ಬೆಳಕಿನ ವೇಗದ ಬಗ್ಗೆ ವಿಜ್ಞಾನಿ ಲೊರೆಂಡ್ಸ್ ಏನನ್ನುತ್ತಾರೆ ನೋಡೋಣ ಸದ್ಯಕ್ಕೆ ಪೂರ್ಣ ವಿವರಣೆ ಕೊಡದಿರುವುದಕ್ಕೆ ಕ್ಷಮೆ ಇರಲಿ

ಕೆಳಕಂಡ Equation ಗಳು ವಸ್ತುವಿನ ದ್ರವ್ಯರಾಶಿ ವೇಗದೊಂದಿಗೆ ಹೇಗೆ ಬದಲಾಗುತ್ತದೆ ಎಂದು ಸಾಪೇಕ್ಷತಾ ಸಿದ್ದಾಂತದ ಆಧಾರದಮೇಲೆ ತೋರಿಸುತ್ತವೆ






ಇದರಲ್ಲಿ mo ವಸ್ತುವಿನ ಮೂಲ ದ್ರವ್ಯರಾಶಿ m ಸಾಪೇಕ್ಷ ದ್ರವ್ಯರಾಶಿ v ವಸ್ತು ಚಲಿಸುತ್ತಿರುವ ವೇಗ  c ಬೆಳಕಿನ ವೇಗ

ಈಗ ವಸ್ತುವು ಬೆಳಕಿನ ವೇಗಕ್ಕೆ ಸಮನಾಗಿ ಚಲಿಸುತ್ತದೆ ಎಂದುಕೊಳ್ಳೋಣ
ಆಗ ಏನಾಗುತ್ತದೆ ಗಮನಿಸಿ!

(ಆಗ V=C)


                                        (Because anything divided by zero is Infinity)


.................................................................................................................................................................
ಈಗ ನೋಡೋಣ ವಸ್ತುವಿನ್ ಗಾತ್ರದ ಮೇಲೆ ವೇಗದ ಪರಿಣಾಮ ಸಾಪೇಕ್ಷತೆಯ ಆಧಾರದ ಮೇಲೆ ಏನಾಗಬಹುದು ಎಂದು


ಈಗ ವಸ್ತುವು ಬೆಳಕಿನ ವೇಗಕ್ಕೆ ಸಮನಾಗಿ ಚಲಿಸುತ್ತದೆ ಎಂದುಕೊಳ್ಳೋಣ
ಆಗ ಏನಾಗುತ್ತದೆ ಗಮನಿಸಿ!






ವಸ್ತುವಿನ ಗಾತ್ರವು ಸೊನ್ನೆಗೆ ಸಮೀಪಿಸುತ್ತದೆ
ಆದರೆ ವಿಚಿತ್ರವೆಂದರೆ ಅದೇ ವಸ್ತುವಿನ ದ್ರವ್ಯರಾಶಿಯು Infinity (ಅನಂತ) ಕಡೆಗೆ ಸಾಗುತ್ತದೆ

ಇದು ಪ್ರಾಯೋಗಿಕವಾಗಿ ಸಾಧ್ಯವಾದರೆ ಏನಾಗಬಹುದು? ಯೋಚಿಸಿ
ಆದರೆ ಈ ರೀತಿಯ ಸಿದ್ಧಾಂತಗಳನ್ನು ಕೆಲವರು ಒಪ್ಪುವುದಿಲ್ಲ
ಆದ್ದರಿಂದ ಸಾಪೇಕ್ಷತಾ ಸಿದ್ದಾಂತ ಸದಾ ಚರ್ಚೆಗೆ ಗ್ರಾಸವಾಗಿದೆ
ಅಬಿಪ್ರಾಯ-ಸಲಹೆ  ತಿಳಿಸಿ
ವಂದನೆಗಳು!!

ಭಾನುವಾರ, ಡಿಸೆಂಬರ್ 12, 2010

ನಿಮಗೇನಾದರೂ ಉಲ್ಕೆ ಬೀಳುವುದು ಕಾಣಿಸಿತಾ? ತಿಳಿಸಿ ಪ್ಲೀಸ್

ನಿಮಗೇನಾದರೂ ಉಲ್ಕೆ ಬೀಳುವುದು ಕಾಣಿಸಿತಾ? ತಿಳಿಸಿ ಪ್ಲೀಸ್
ಉಲ್ಕಾಪಾತ ವೀಕ್ಷಿಸಲು ಬೆಳೆಗ್ಗೆ ಚಳಿಯಲ್ಲಿ ಎದ್ದು ಕೂತಿದ್ದೇನೆ ಬಾನಾಗಸದತ್ತ ಆಗಾಗ ದೃಷ್ಟಿ ನೆಟ್ಟು!!
ಈವರೆಗೂ ಒಂದೂ ಉಲ್ಕೆ ಬೀಳುವುದ ಕಾಣಲಾಗಲಿಲ್ಲ
ನಿಮಗೇನಾದರೂ ಕಾಣಿಸಿತಾ ತಿಳಿಸಿ ಪ್ಲೀಸ್
ಆಗಾಗ ಅಚಾನಕ್ಕಾಗಿ ಬೀಳುವ ಉಲ್ಕೆಗಳನ್ನು ಕೆಲವರ್ಷಗಳ ಹಿಂದೆ ನೋಡಿದ್ದು ಬಿಟ್ಟರೆ ನಾನಾವುದೇ ಈವರೆಗೆ ಉಲ್ಕಾವರ್ಷವನ್ನು ನೋಡಲಾಗಲಿಲ್ಲ

ಶನಿವಾರ, ಡಿಸೆಂಬರ್ 11, 2010

ನಾಳೆ-ನಾಡಿದ್ದು ಉಲ್ಕಾಪಾತವಾಗುತ್ತದಂತೆ

ನಾಳೆ-ನಾಡಿದ್ದು ಉಲ್ಕಾಪಾತವಾಗುತ್ತದಂತೆ
ನನಗೆ ಇಂದಿನ NEWS ನೋಡಿ ತಿಳಿಯಿತು

ದಿನಾಂಕ ೧೨ ಹಾಗು ೧೩ ಡಿಸೆಂಬರ್ ೨೦೧೦ ರಂದು ಬೆಳಿಗ್ಗೆ ಸುಮಾರು ೦೫:೦೦ ರಿಂದ ೫:೩೦ ರ ಅವದಿಯಲ್ಲಿ ನೋಡಬಹುದಂತೆ ನಿಮಗೆ ಹೆಚ್ಚಿನ ಮಾಹಿತಿ ಗೊತ್ತಿದ್ದರೆ ದಯವಿಟ್ಟು ತಿಳಿಸಿ
ಮಿಥುನ ರಾಶಿಯ ಕಡೆಯಿಂದ ಅವು ಬರುವುದರಿಂದ ಇವಕ್ಕೆ ವಿಜ್ಞಾನಿಗಳು ಜಮಿನೈಡ್ಸ್ geminiads ಎಂದು ಹೆಸರಿಸಿದ್ದಾರೆ
ನಾವೇನಾದರೂ ಮಾತನಾಡುವಾಗ ಉಲ್ಕೆ ಬಿದ್ದರೆ ಆ ಮಾತು ಸತ್ಯವಾಗುತ್ತದೆ ಎಂದು ಬಹಳ ಜನರು ನಂಬುತ್ತಾರೆ

ಏನಾದರಾಗಲಿ ದೀಪಾವಳಿ ನಂತರ ಆಗಸದಲ್ಲಿ ಬಾಣ-ಬಿರುಸಿನ ಚಿತ್ತಾರ!!
ನಿಮಗೇನಾದರೂ ಚನ್ನಾಗಿ ಕಾಣಿಸಿದರೆ ನನ್ನ ಜೊತೆ ಅನುಭವಗಳನ್ನು ದಯವಿಟ್ಟು ಹಂಚಿಕೊಳ್ಳುತ್ತೀರ ಎಂದುಕೊಂಡಿದ್ದೇನೆ
ನಾನಂತೂ ಇದುವರೆಗೆ ಒಂದೂ ಉಲ್ಕಾಪಾತದ ದೄಶ್ಯಾವಳಿ ನೋಡಿಲ್ಲ

ನಮ್ಮ ಕೃತಕ ಉಪಗ್ರಹಗಳಿಗೆ ಅಪಾಯವೇನೂ ಆಗದಿರಲಿ ಎಂದು ಆಶಿಸೋಣ
ನಿಮ್ಮ ಸಲಹೆಗಳನ್ನು ನಿರೀಕ್ಷಿಸುತ್ತಿರುತ್ತೇನೆ

ಶನಿವಾರ, ನವೆಂಬರ್ 6, 2010

ಬೆಳಕಿನ ವೇಗವನ್ನು ಮೀರಲು ಏಕೆ ಸಾದ್ಯವಿಲ್ಲ?

ಬೆಳಕಿನ ವೇಗವನ್ನು ಮೀರಲು ಏಕೆ ಸಾದ್ಯವಿಲ್ಲ?



ಬೆಳಕಿನ ವೇಗವನ್ನು ಮೀರಲು ಸಾದ್ಯವಿಲ್ಲ
ಇದನ್ನು ಐನ್ ಸ್ಟೀನ್ ತಮ್ಮ velocity addition theorem ನಲ್ಲಿ ತೋರಿಸಿಕೊಟ್ಟಿದ್ದಾರೆ
ಅದರಂತೆ ಹಾಗೇನಾದರೂ ಯಾರಾದರೂ ಬೆಳಕಿನ ವೇಗವನ್ನು ಮೀರಿ ಪ್ರಯಾಣಿಸಿದರೆ(+v)
ಅವರು ಭೂತಕಾಲಕ್ಕೆ ಪ್ರಯಾಣಿಸುತ್ತಾರೆ
ಹಾಗೆಯೇ ಋಣಾತ್ಮಕ ಬೆಳಕಿನವೇಗದಲ್ಲಿ ಪ್ರಯಾಣಿಸಿದರೆ ಭವಿಶ್ಯತ್ ಕಾಲವನ್ನು ತಲುಪುತ್ತಾರೆ(-v)

ಹೇಗೆ ಋಣಾತ್ಮಕ ಉದ್ದದ ಗೆರೆ ಎಳೆಯಲು ಸಿದ್ಧವಿಲ್ಲವೋ ಹಾಗೇ ಋಣಾತ್ಮಕ ಬೆಳಕಿನವೇಗವನ್ನು ಕಲ್ಪಿಸಲೂ ಸಾದ್ಯವಿಲ್ಲ ಹಾಗೇ ಭವಿಷ್ಯವನ್ನೊ ಕಲ್ಪಿಸಲೂ ಸಾಧ್ಯವಿಲ್ಲ

ಇದರ ಬಗ್ಗೆ ಕ್ರಮೇಣ ವಿವರವಾಗಿ ತಿಳಿಸುವ ಪ್ರಯತ್ನ ಮಾಡುತ್ತೇನೆ

ಸೋಮವಾರ, ಮೇ 17, 2010

ನಿನ್ನೆಯ ಆಗಸದ ವೈಶಿಷ್ಟ್ಯವನ್ನು ನೀವೆಲ್ಲಾ ನೋಡಿ ಸವಿದಿದ್ದೀರಿ ಎಂದು ಭಾವಿಸಿದ್ದೇನೆ.

ನಿನ್ನೆಯ ಆಗಸದ ವೈಶಿಷ್ಟ್ಯವನ್ನು ನೀವೆಲ್ಲಾ ನೋಡಿ ಸವಿದಿದ್ದೀರಿ ಎಂದು ಭಾವಿಸಿದ್ದೇನೆ. ಇವು ನಿನ್ನೆ ಕಂಡ ಚಂದ್ರ ಹಾಗು ಶುಕ್ರ ಗ್ರಹದ ಚಿತ್ರಗಳು.ಆದರೆ ನಾನು ಮನೆ ತಲುಪುವಾಗ ತಡವಾಗಿತ್ತು ಆದ್ದರಿಂದ ಇವರಿಬ್ಬರೂ ತುಂಬಾ ಸನಿಹದಲ್ಲಿದ್ದಾಗ ಚಿತ್ರ ತೆಗೆಯಲಾಗಲಿಲ್ಲ ಅತೀ ಅಪರೂಪ ಅಲ್ಲದಿದ್ದರೂ ವಿಶಿಷ್ಟ-ಸೋಜಿಗ ಈ ದೃಶ್ಯಗಳು ಮನೆಯಲ್ಲಿ ನಾವು ಎಲ್ಲರೂ ನೋಡಿ ಆನಂದಿಸಿದೆವು



ನಿಮಗೇನನ್ನಿಸಿತು? ಸಾಧ್ಯವಾದ್ರೆ ತಿಳಿಸಿ

ಚಂದ್ರನ ಕಪ್ಪು ಭಾಗದ ಸುತ್ತಲೂ ಒಂದು ಬಳೆಯ ತರಹದ ಬೆಳಕಿನ ಪ್ರಭೆ ಕಾಣುತ್ತದಲ್ಲಾ ಅದು "Earth's Shade" ಇದು ಭೂಮಿಯ ಮೇಲೆ ಬೀಳುವ ಸೂರ್ಯನ ಬೆಳಕಿನಿಂದ ಆಗುವುದು ಇದನ್ನು ಗೆಲಿಲಿಯೂ ಸಹ ಗಮನಿಸಿದ್ದ ಎಂದು ಕೇಳಿದ್ದೇನೆ ಶುಕ್ರನ ಗಾತ್ರ ಸಹ ಸುಮಾರು ಭೂಮಿಯಷ್ಟೇ ಆದರೆ ವಾತಾವರಣ ದಟ್ಟವಾಗಿದೆ ಅದಕ್ಕೇ ಇದು ಒಂದು ಹೋಳಪಿನ ಕಾಯ 

ಮುಂದಿನ ಸಂಚಿಕೆಗಳು ಬರುವುದು ಒಂದು ತಿಂಗಳಿಗೂ ಹೆಚ್ಚು ತಡವಾಗಬಹುದು ದಯವಿಟ್ಟು ನಿರೀಕ್ಷಿಸಿ
ಎಲ್ಲ  ಬ್ಲಾಗ್ ಮಿತ್ರರಿಗೆ,ಓದುಗರಿಗೆ   ಧನ್ಯವಾದಗಳು

ಮಂಗಳವಾರ, ಏಪ್ರಿಲ್ 13, 2010

ಸೂರ್ಯನ ಒಂದು ಇಂಟರ್ ವ್ಯೂ

(ಸೂರ್ಯನ ಅನುಕರಣೆಗೆ ಅನುಮತಿ ಕೋರಿ)
ಸೂರ್ಯನ ಸರಳ ವಿವರಣೆಗಳು ಹೀಗಿವೆ 

ಒಂದು ದಿನ ಬೇಗ ಬೆಳಿಗ್ಗೆ ಎದ್ದ ನಂತರ ಸೂರ್ಯನನ್ನೂ ನಮ್ಮ ಜೊತೆ ಚಹಾ ಕುಡಿಯಲು ಆಹ್ವಾನಿಸಿದರೆ ಹೇಗೆ?  ಸೂರ್ಯನೇನೂ ಬೇಜಾರು ಮಾಡಿಕೋಳ್ಳುವುದಿಲ್ಲ ಹಾಗೆ ಇಲ್ಲ "ನಾನೆ ದೊಡ್ಡವನು "ಅಂತ ಅಹಂಕಾರ ತೋರಿಸುವುದೂ ಇಲ್ಲ (ಈಗಿನ ನಮ್ಮ ಶಿವಮೊಗ್ಗದ ಬಿಸಿಲಿಗೆ ಚಹಾ ಬಿಸಿಲಲ್ಲಿ ಇಟ್ಟರೆ ಸಾಕು ಆವಿಯಾಗಿ ಸೂರ್ಯ ಕುಡಿದ ಹಾಗೆ ಅಂದುಕೊಂಡು ಸೂರ್ಯನನ್ನು ಬಯ್ಯುವಂತಗಬಾರದು)

ಅವನ ಬಗ್ಗೆ ಸ್ವಲ್ಪ ತಿಳಿದುಕೋಳ್ಳ ಬಹುದಲ್ಲವಾ 
ಅದ್ರೆ ಪಾಪ ನಮ್ಮ ಸೂರ್ಯ ಏನನ್ನೂ ತಿನ್ನುವುದಿಲ್ಲ ಅವನು ತಿನ್ನುವುದು  ರಾಶಿ ಹೈಡ್ರೊಜನ್ ಮಾತ್ರ

ಏನಾದರೂ ಆಗಲಿ ಬೆಳಿಗ್ಗೆ ತಾನೆ ಸೂರ್ಯ ಬೇಗ ಎದ್ದಿರುತ್ತಾನೆ ಕೆಂಪಗೆ ಪೂರ್ವದ ಮೋಡಗಳ ಮರೆಯಲ್ಲಿ ಇಣುಕುತ್ತಾನೆ  ಮಂಜಿನ ಪರದೆಯನ್ನು ಸರಿಸುತ್ತಿದ್ದಾನೆ(ಇಂದು ಹಗಲು ರಾತ್ರಿ ಸಮ ಸಮ ಕಾಲಾವಧಿಯದು- ಇಂದು ಮಾರ್ಚ್ ೨೦ - ಈ ಲೇಖನ ಸಿದ್ಧಪಡಿಸಲು ಪ್ರಾರಂಭಿಸುತ್ತಿರುವ  ದಿನ )

ಸೂರ್ಯನನ್ನು ಅಣ್ಣಾ ಬಾರೋ ನಿನ್ನ ಫೊಟೋ ತೆಗೆದು ಆಯ್ತು ಒಂದು ಇಂಟರ್ ವ್ಯೂ ನೀಡುತ್ತೀಯಾ ಅಂದರೆ ಸೂರ್ಯ ನೋ ಅನ್ನುವುದೇ ಹೌದಪ್ಪಾ ಸೂರ್ಯ ಯಾವತ್ತೂ ತುಂಬಾ ಸಮಯಪ್ರಜ್ಞೆ ಉಳ್ಳವನು ಯಾರು ಏನದರೂ ಆಗಲಿ ಪ್ರತೀದಿನ ವಿಶ್ವಕೆಲ್ಲಾ ಶಕ್ತಿ ಸಪ್ಲೆ ಮಾಡುತ್ತಲೇ ಇರಬೇಕು 

ನಮ್ಮ ಸೂರ್ಯ ಬ್ಯುಸೀ ಅದೂ ಐನೂರು ಕೋಟಿ ವರ್ಷಗಳಿಂದ ನೋ ರೆಸ್ಟ್ ,ನೊ ಟೈಮ್ ವೇಸ್ಟ್ 
ಆದ್ರೂ ನಮ್ಮ ವಿಜ್ಞಾನಿಗಳು ಸೂರ್ಯನ ಹಲವು ವಿವರಗಳನ್ನು ಪಡೆದಿದ್ದಾರೆ 

ಮೋನ್ನೆ ಸೂರ್ಯ ರಾತ್ರಿ ಕನಸಲ್ಲಿ ಬರ‍ೋದೆ?
 ನಾನು ಬೇಳಗಾಯ್ತು ಅಂದುಕೋದುಬಿಟ್ಟೇ!!!
ಸೂರ್ಯ ಎಳು ಬಣ್ಣದ ಕುದುರೆಗಳನ್ನ ಕಾಮನಬಿಲ್ಲೀನಲ್ಲಿ ಕಳ್ಸಿರುತ್ತೇನೆ ಅದನ್ನು ಏರಿ ಬಾ ಅನ್ನೋದೆ??
ನನಗೆ ಹೆದರಿಕೆ ಆದರೂ ಹೇಗೋ ಹೋದ್ರೆ ಸೂರ್ಯ ತನ್ನ ಬಗ್ಗೇ ಸ್ವಲ್ಪ ಪರಿಚಯ ಮಾಡಿಕೋಟ್ಟ
ಅದರ ಕೆಲವು ವಿಚಾರಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ


ಪ್ರಶ್ನೆ-ನಿನ್ನ ವಯಸ್ಸು ಎಷ್ಟು 
ಸೂರ್ಯ- ಐನೂರು

ಪ್ರಶ್ನೆ- ವರ್ಷನಾ 
ಸೂರ್ಯ- ಅಲ್ಲಪ್ಪಾ ಐನೂರು ಕೋಟಿ ವರ್ಷ
ಪ್ರಶ್ನೆ- ಭೂಮಿಗೆ ಇಲ್ಲಿಂದ ಎಷ್ಟು ಹೋತ್ತಿನ ಪ್ರಯಾಣ 
ಸೂರ್ಯ- ಎಂಟು ಪಾಯಿಂಟ್ ಮೂರು ನಿಮಿಷದ ಪ್ರಯಾಣ
ಪ್ರಶ್ನೆ-
KSRTC  ಬಸ್ ನಲ್ಲಾ? 
ಸೂರ್ಯ- ಅಲ್ಲVIBGYOR ನಲ್ಲಿ
ಪ್ರಶ್ನೆ- ಅಂದರೆ 
ಸೂರ್ಯ-ಬೆಳಕಿಗೆ ಎಂಟು ನಿಮಿಷ ಬೇಕು ಅಂದ್ರೆ ಅದು ಸುಮಾರು ಹದಿನೈದು ಕೋಟಿ ಕೀ.ಮೀ ನಿನಗೆ ನಡೆಯುತ್ತಾ ಬಂದರೆ ೪೦೦೦ ವರ್ಷಗಳೇ ಬೇಕಾಗಬಹುದು
ಪ್ರಶ್ನೆ-ನಿನ್ನ ಸೈಜ಼್ ಏನು?
ಸೂರ್ಯ- ೧೩೯೨೦೦೦(1392000) ಕಿ.ಮೀ ನಾನು ನಿಮ್ಮಮ್ಮ ಭೂಮಿಗಿಂತ ೧೦೩ ಪಟ್ಟು ದೊಡ್ಡವನು ನನ್ನನೋಳಗೆ ಸುಮಾರು ೧೩ ಲಕ್ಷ ಭೂಮಿಯ ಗಾತ್ರದ ವಸ್ತುಗಳನ್ನು ತುಂಬಬಹುದು

ಪ್ರಶ್ನೆ-ನಿನ್ನನ್ನು ಮುಟ್ಟಬಹುದಾ? ಅದ್ರೆ ಕೈ ಸುಡುತ್ತೆ?
ಸೂರ್ಯ- ನಾನೂ ಒಂದು ಪ್ರಶ್ನೆ ಕೇಳುತ್ತೇನೆ ನಿನ್ನ ಮೈ ತಾಪಮಾನ ಎಷ್ಟು ಗೋತ್ತಾ ಮಾನವನ ದೇಹದ ಸರಾಸರಿ ತಾಪ ತಿಳಿಸು ನೋಡೋಣ ?

ಸುಮಾರು ೩೬ ರಿಂದ ೩೭ ಡಿಗ್ರೀ (ತೋಂಭತ್ತೇಂಟು ಡಿಗ್ರೀ ಫ಼್ಯಾರನ್ ಹೀಟ್ ಅಂತ ನಮ್ಮ ಡಾಕ್ಟರ್ ಹೇಳುತ್ತಿದ್ದರು)
ಸೂರ್ಯ-ನನ್ನ ಮೈತಾಪ ಸುಮಾರು ೬೦೦೦ ಡಿಗ್ರೀ ಸೆಂಟಿಗ್ರೇಡ್ 

ಪ್ರಶ್ನೆ- ನಿನಗೆ ಜ್ವರ ಬಂದ್ರೆ ? ನೀನು ಇನ್ನೂ ಬಿಸಿಯಾಗಲ್ವಾ ನಮ್ಮ ಭೂಮಿಗೆ ಅವಾಗ ಬಿಸಿಲು ಇನ್ನೂ ಹೆಚ್ಚಾಗುತ್ತಾ? ಯಾವ ಡಾಕ್ಟರ್ ಹತ್ರ ಹೋಗ್ತೀಯಾ?
ಸೂರ್ಯ- ಸದ್ಯ ನನಗೆ ಏನೂ ಹಾಗೆ ಆಗಲ್ಲ ಅದರೆ ಕೆಲವು  ಬೆರೇ ತಾರೆಗಳು ತಮ್ಮ ಮೈತಾಪದಲ್ಲಿ ಬದಲಾವಣೆ ತೋರುತ್ತವೆ ನನಗೇನೂ ಹಾಗಾಗಲ್ಲ
ನನಗೆ ಜನ್ಮ ನೀಡಿದ್ದು ನನ್ನ ಆರೈಕೆ ಮಾಡೋದು ಒಬ್ಬರೆ ನಮ್ಮ ಅಮ್ಮ - ಪ್ರಕೃತಿ -ನೇಚರ್ ನನ್ನಲ್ಲಿ ಎನಾದ್ರೂ ಸ್ವಲ್ಪ ಬದಲಾವಣೆ ಕಂಡರೂ ನಿಮ್ಮ ವಿಜ್ಞಾನಿಗಳು ಹೆದರುತ್ತಾರೆ ಸದ್ಯಕ್ಕಂತೂ ಇನ್ನೂ ಹಲವು  ಕೋಟಿ ವರ್ಷ ನನ್ನ  ಅರೋಗ್ಯ ಚನ್ನಾಗಿರುತ್ತದೆ 
ಅದ್ರೆ ಭೂಮಿ ಬಿಸಿಯಗಬಹುದಾಗಿರೋದು ನನ್ನಿಂದ ಅಲ್ಲ ಅತಿಯಾದ ಪರಿಸರ ಮಾಲಿನ್ಯದಿಂದ ,ಪಾಪ ಆ ಭೂಮಿತಾಯಿಯನ್ನು  ಯಾಕೆ ಹಾಗೆ ಗೋಳು ಹೊಯ್ದುಕೊಳ್ಳುತ್ತೀರೋ ಏನೋ .
 ಮಾಲಿನ್ಯ,ಕಾಡುನಾಶ ನಿಲ್ಲಿಸದಿದ್ದರೆ ಆಗ ಬಿಸಿಲು ಹೆಚ್ಚಗುತ್ತದೆ ನಿಮಗೇ ಅಪಾಯ ನೋಡು.

ಪ್ರಶ್ನೆ-ನಿನಗೆ ಯಾವ ತಿಂಡಿ ತುಂಬಾ ಇಷ್ಟ 
ಸೂರ್ಯ- ನಾನು ತಿನ್ನೋದು ಹೈಡ್ರೋಜನ್ ಮಾತ್ರ  ಕೇವಲ ಅದರಿಂದಾನೆ ಬರೋ ಶಕ್ತಿಯಿಂದ ನಿಮ್ಮ ಭೂಮಿಯಲ್ಲಿ ಹಲವು ಸಸ್ಯಗಳು ಬೆಳೆಯುತ್ತವೆ ನಿಮಗೆಲ್ಲಾ ರುಚಿಯಾದ ಆಹಾರ ಲಭಿಸುತ್ತೆ 

ಪ್ರಶ್ನೆ-ದಿನಾ ಹೈಡ್ರೋಜನ್  ತಿನ್ನುತ್ತಾ ಕಾಲ ಕಳೆಯುತ್ತಿಯಲ್ಲಾ ಬೇಜಾರಾಗಲ್ವ
ಸೂರ್ಯ- ನೋ ಹಾಗೆ ಮಾಡೋದ್ರಿಂದ  ನನ್ನ ತೂಕ ಕಡಿಮೆಯಾಗುತ್ತೆ

ಪ್ರಶ್ನೆ- ನಾನಿವತ್ತು ಮೂರು ದೋಸೆ ತಿಂದೆ ನೀನು ಎಷ್ಟು ತಿನ್ನುತ್ತೀಯಾ
ಸೂರ್ಯ- ನನಗೆ ಸೆಕೆಂಡಿಗೇ ಸುಮಾರು ೪ ಲಕ್ಷ ಟನ್ ಹೈಡ್ರೋಜನ್ ಬೇಕು ನಾನು ಏನಂದರೂ ಸೌರ ವ್ಯವಸ್ಥೆಗೆ ದೊಡ್ಡವನಲ್ವಾ ಎಲ್ಲಾ ಗ್ರಹ ಕಾಯಗಳನ್ನು ತಿರುಗಿಸಬೇಕಲ್ಲಾ ನಿಮ್ಮ ಭೂಮಿಗೂ ಶಕ್ತಿ ಕೋಡಬೇಕಲ್ಲಾ ಹಾ! ಮಳೆಗಾಲ ಬಂತು ಭೂಮಿ ಹತ್ತಿರ ಬರುತ್ತಾಳೆ 
ನಿನಗೆ ಗೊತ್ತಾ ನಾ ಉತ್ಪತ್ತಿ ಮಾಡೋ ಶಕ್ತಿಯಲ್ಲಿ ಕೇವಲ ೦.೦೦೦,೦೦,೦೦೦೫ ರಷ್ಟು ಮಾತ್ರ ನಿಮ್ಮ ಭೂಮಿಗೆ ಸಾಕು

ಪ್ರಶ್ನೆ- ನಿನ್ನ ತೂಕ ಎಷ್ಟು 
ಸೂರ್ಯ- ತೂಕ ಅಲ್ಲ ದ್ರವ್ಯರಾಶಿ ಭೂಮಿಗಿಂತ  ೩೩೨೯೪೬ (332986) ಪಟ್ಟು ಅಧಿಕ 
ನಾನು ಸೌರವ್ಯೂಹದ  ಒಟ್ಟು ದ್ರವ್ಯರಾಶಿಯ  ೯೯.೯೮ (99.98)ರ ಭಾಗದಷ್ಟು ನಾನೇ ಇದ್ದೇನೆ ಉಳಿದ ಚೂರು ಪರು ತೂಕ ಮಾತ್ರ ನೀವೆಲ್ಲಾಭೂಮಿ, ಗ್ರಹ ಉಲ್ಕೆ, ಧೂಮಕೇತು  ಎಲ್ಲ ಇರುವಿರಿ 
ನಾನು ಕೆಲವು ದಿನಗಳಲ್ಲೇ ನಿಮ್ಮ ಭೂಮಿಯ ತೂಕಕ್ಕೆ ಸಮನಾದ ಹೈಡ್ರೋಜನ್ ತಿಂದು ಮುಗಿಸಿರುತ್ತೇನೆ

ಪ್ರಶ್ನೆ-ನಿನ್ನ ಮುಖದ ಮೇಲೆ ಏನದು  ಚುಕ್ಕೆಗಳು ,"ಪಿಂಪಲ್" ಆಗಿದೆಯಾ
ಸೂರ್ಯ-ಅವು ನನ್ನ ಮೇಲಿರೋ ಕಲೆಗಳು ಸನ್ ಸ್ಪಾಟ್ಸ್ ಅಂತ ನಿಮ್ಮ ವಿಜ್ಞಾನಿಗಳು ಕರೀತಾರೆ

ಪ್ರಶ್ನೆ-ಅದೇನು?
ಸೂರ್ಯ-ಆ ಕಲೆಗಳ ಬಳಿ ತಾಪಮಾನ ಬೇರೆಡೆಗಿಂತ ಸ್ವಲ್ಪ ಕಡಿಮೆ ಇರುತ್ತೆ, ಆದರೆ ಅಲ್ಲಿ ಗುರುತ್ವ ಹೆಚ್ಚಿರುತ್ತೆ ಹಾಗೆ  ಕಲೆಗಳು ಚಲಿಸೋದು ಸ್ಥಾನಾಂತರವಾಗೋದು ಎಲ್ಲಾ ಇದೆ.ಆ ಕಲಿಗಳು ಇರುವಲ್ಲಿ ಕಾಂತಕ್ಷೇತ್ರ ಪ್ರಬಲವಾಗಿರುತ್ತದೆ ಅದು ಭೂಮಿಗಿಂತ ಸುಮಾರು ೮೦೦೦ ಪಟ್ಟು ಹೆಚ್ಚು,ಅವು ಗುಂಪುಗೂಡುವುದೂ ಇದೆ ಅವು ಸುಮಾರು ೧೧ ವರ್ಷಗಳಿಗೊಮ್ಮೆ ನಿರಂತರವಾಗಿ  ಗುಂಪುಗೊಡುತ್ತವೆ, ಬದಲಾಗುತ್ತವೆ
ಅವು ಭೂಮಿಗಿಂತಲೂ ದೋಡ್ಡದಾಗಿರೋದೂ ಇದೆ.

ಪ್ರಶ್ನೆ- ಕಲೆಗಳಿರುವಲ್ಲಿ ತಾಪಮಾನ ಕಡಿಮೆಯಾ ಹಾಗದ್ರೆ ನಿನ್ನ ಶರೀರದೋಳಗೆ ತಾಪಮಾನ ಎಷ್ಟಿರಬಹುದು
ಸೂರ್ಯ- ಹೆದರಿಕೋಳ್ಳುವುದಿಲ್ಲಾ ಅಂದ್ರೆ ತಿಳಿಸುತ್ತೇನೆ ಅದನ್ನು ನೀನು ಕಲ್ಪನೇ ಮಾಡೋಕು ಆಗಲ್ಲ
ಅದು ಸುಮಾರು ಒಂದೂವರೆಯಿಂದ ಎರ‍ಡು ಕೋಟಿ ಡಿಗ್ರೀ ಕೆಲ್ವಿನ್
ಪ್ರಶ್ನೆ- ಅಬ್ಬಾ ಊಹಾತೀತವಾಗಿತ್ತು ನಿಜ ನಾನೇನೂ ಹೆದರಲ್ಲಾ ನಮ್ಮ ಸರ್ನ್’ನ ವಿಜ್ಞಾನಿಗಳು ಕಳೆದ ವರ್ಷ ಪಾರ್ಟಿಕಲ್ ಆಕ್ಸಿಲರೇಟರ್ ನಲ್ಲಿ ಇದಕ್ಕಿಂತಲೂ ಹೆಚ್ಚಿನ ತಾಪಮಾನ ಸೃಷ್ಟಿಸಿದ್ದರು ಆದರೆ ಅದು ನಿನ್ನಂತೆ ನಿರಂತರವಾಗಿರೋಕೆ ಸಾಧ್ಯಾನೇ ಇಲ್ಲ 
ಸೂರ್ಯ-ನಿಮ್ಮ ವಿಜ್ಞಾನಿಗಳು  ಬಿಡಪ್ಪಾ ಏನಾದ್ರೂ ಮಾಡ್ತಾರೆ ಸೌರಶಕ್ತಿಯಿಂದಾನೇ ನೀರು ಕಾಯಿಸೋದು, ವಿದ್ಯುತ್ ಪಡೆಯೋದು ಎಲ್ಲಾ ಮಾಡ್ತಾರೆ ಅದನ್ನು ಸರಿಯಾಗಿ ಉಪಯೋಗಿಸಬೇಕಷ್ಟೆ?

ಪ್ರಶ್ನೆ- ನಿನ್ನ ಬಗ್ಗೆ ಇನ್ನೂ ಸ್ವಲ್ಪ ಹೇಳುತ್ತೀಯಾ 
ಸೂರ್ಯ-ನನ್ನ ತಲೆ ಗುಂಗುರಾಗಿ ಕಾಣಿಸುತ್ತದಲ್ಲಾ ಅವು ಚಾಚಿಕೆಗಳು ಅವುಗಳಲ್ಲಿ ಕೆಲವು ನಿಮ್ಮ ಭೂಮಿಗಿಂತ ದೊಡ್ಡದಾಗಿವೆ ಅವು ಮೇಲಕ್ಕೆ ಚಿಮ್ಮಿ ಬೀಳುತ್ತಿರುತ್ತವೆ
(above photo downloaded from net)
ಸೂರ್ಯ- ನನ್ನೋಳಗೆ ಹಲವು ಪದರಗಳಿವೆ  ಅದರಲ್ಲಿ ಅತ್ಯಂತ ಒಳಗಿರೋದು ಗರ್ಭ(core) ಅದರ್ಲ್ಲೇ ಸುಮಾರು ಎರಡು ಕೋಟಿ ಡಿಗ್ರೀ ತಾಪವಿದೆ ಅದರ ನಂತರ ಪ್ರಭಾವಲಯ ಅದರಲ್ಲಿ ಹೈಡ್ರೋಜನ್ ಪರಮಾಣುಗಳು ಸೇರಿ ಹೀಲಿಯಮ್ ಆಗಿ ಶಕ್ತಿ ಬರುತ್ತದೆ
ನನ್ನ ಅತ್ಯಂತ ಹೊರಭಾಗ  ಕರ‍ೋನಾ(corona) ಅದು ಯಾವಾಗಲೋ ಕಾಣೋದೇ ಇಲ್ಲ ಅದನ್ನು ನೀವು ಸೂರ್ಯಗ್ರಹಣದ ಸಮಯದಲ್ಲಿ ಮಾತ್ರ ನೋಡಬಹುದು ಅದನ್ನು ಅಧ್ಯಯನ ಮಾಡೋದ್ರಿಂದ ನನ್ನ ಬಗ್ಗೆ ಹಲವು ವಿಷಯ ತಿಳಿಯಬಹುದು
(above -photo downloaded from net)
ಪ್ರಶ್ನೆ- ಮತ್ತೆ ಗ್ರಹಗಳು ಅವ್ರು ನಿನ್ನ ಫ಼್ರೆಂಡ್ಸಾ ಮತ್ತೆ ನಿನ್ನ ಸುತ್ತಾನೆ ಇರುತ್ತಾರೆ ಅವರು ನಿನಗೆ ಎಲ್ಲಿ ಸಿಕ್ಕಿದರು 
--ಸೂರ್ಯ--ಅವರು ನನ್ನ ಜೋತೆಗೇ ಹುಟ್ಟಿದವರು ನನ್ನ ಸುತ್ತಾ ಇದ್ದ ಹಲವಾರು ವಸ್ತುಗಳು ಢಿಕ್ಕಿ ಹೊಡೆದು ಒಂದಾಗಿ ಕೋನೆಗೆ ಒಂದು ನಿಯಮಿತ ಆಕಾರ ಕಾಯಗಳಾದವು ಈಗಲೂ ನಿಯಮಿತ ಅಕಾರವಿಲ್ಲದವು ಹಲವು ಇವೆ
ಅದರಲ್ಲಿ ನಿಮ್ಮ ಭೂಮಿ ನನ್ಗೆ ತುಂಬಾ ಇಷ್ಟ ಭೂಮಿ ತುಂಬಾ ದೂರದಲ್ಲೋ ಇಲ್ಲ ಹತಿರದಲ್ಲೂ ಇಲ್ಲ  ಆದರಿಂದ ಭೂಮಿಗ ಒಂದು ನಿಯಮಿತ ಪ್ರಮಾಣದ ಶಕ್ತಿ ನನ್ನಿಂದ ಸಿಗುತ್ತದೆ ಆದ್ದರಿಂದ  ನಿಮ್ಮ ಭೂಮಿಯ ಮೇಲೆ ಜೀವಿಗಳಿವೆ

ಪ್ರಶ್ನೆ:-ಏನಿದು ಇಷ್ಟೊಂದು ಬಿಸಿಲು ಅದೂ ಈ ಶಿವಮೊಗ್ಗದಲ್ಲಿ? ಹೊರಗೆ ಬರೋಕಾಗಲ್ಲ,ನನ್ನ ಅಕ್ವೇರಿಯಮ್ ನಲ್ಲಿ ಒಂದೇ ವಾರಕ್ಕೆ ನೀರು ಎರಡು ಸೆಂಟೀಮೀಟರ್ ಕಡಿಮೆಯಾಗಿದೆ.  ಮೊದಲು ನಾಡೆಲ್ಲಾ ತುಂಬಾ ತಂಪಾಗಿತ್ತು ಕೆಲವು ವರ್ಷಗಳಿಂದ ಝಳ ಹೇಗಿದೆ ನೋಡು?ಇನ್ನು ಉತ್ತರ ಕರ್ನಾಟಕ ಹೇಗೋ ಏನೋ? ವಿದ್ಯುತ್ ಸಮಸ್ಯೆ  ಬೇರೆ ಇದಕ್ಕೆಲ್ಲಾ ನೀನೇ ಕಾರಣ ಅಲ್ವಾ ಅದಕ್ಕೆ ನಿನ್ನ ತಾಪ ಕಡಿಮೆ ಮಾಡೋಕಾಗಲ್ವಾ?

ಸೂರ್ಯ:=ಅದು ನನ್ನ ಬಿಸಿಲಿನಿಂದ ಏನೋ ಸರಿ ಆದರೆ ಅದಕ್ಕೆ ಬಿಸಿಲೊಂದೇ ಕಾರಣವಲ್ಲ ಬಿಸಿಲಿನಿಂದಾನೇ ನೀರು ಆವಿಯಾಗಿ ಮೋಡವಾಗಿ ಮಳೆ ಬರೋದು ಅಂತಾ ನಿಮಗೆ ಗೋತ್ತೇ ಇದೆಯಲ್ಲಾ.ನನ್ನ ತಾಪ ಕಡಿಮೆಯಾಗ ಬೇಕೆಂದರೆ ಮರಗಳನ್ನು ಕಡಿಯಬಾರದು,ಪ್ರತಿಯೊಬ್ಬರೂ ಹೆಚ್ಚು ಮರ ಬೆಳೆಸಬೇಕು, ಹಸಿರು ಮನೆ ಪರಿಣಾಮ ಉಂಟಾಗದಂತೆ ತಡೆಯಬೇಕು ಅದಕ್ಕೆ ವಾಯು ಮಾಲಿನ್ಯ  ಕಡಿಮೆ ಮಾಡಬೇಕು ವಾಹನಗಳ ಸಂಖ್ಯೆ ಕಡಿಮೇ ಮಾಡಬೇಕು ಎದೆಲ್ಲಾ ಸಾಧ್ಯವಾಗಬೇಕೆಂದರೆ ಜನಸಂಖ್ಯೆ ನಿಯಂತ್ರಣದಲ್ಲಿರಬೇಕು,
ಅಷ್ಟೇ ಅಲ್ಲ ಸೌರ ಉಪಕರಣಗಳನ್ನು ಬಳಸಬೇಕು ವಿದ್ಯುತ್ ಉಳಿಸಬೇಕು  .
--ಹೌದು ಇದರಿಂದ ರಾಯಚೂರಿನ ಶಾಖೋತ್ಪನ್ನ-ವಿದ್ಯುತ್-ಸ್ಥಾವರದ ಹೊರೆ ಕಡಿಮೆಯಾಗುತ್ತೆ ಇದರಿಂದ ಕಡಿಮೆ ಕಲ್ಲಿದ್ದಲು ಉರಿಯೋದ್ರಿಂದ ವಾಯು ಮಾಲಿನ್ಯ ಕಡಿಮೆಯಾಗುತ್ತೆ ನಮ್ಮ ಮನೆಯಲ್ಲಿ "CFL ,TUBE LIGHT" ಇದೆ ಇದರಿಂದಾನು ವಿದ್ಯುತ್ ಉಳಿಯುತ್ತೆ ಅಲ್ವಾ 

ಸೂರ್ಯ:= ನಿಮ್ಮ ವಿಜ್ಞಾನಿಗಳು  ಇತ್ತೀಚಿಗೆ ಕಂಡುಹಿಡಿದಿರುವಂತೆ ಮನೆಯ ಮೇಲೆ ಬಿಳಿ ಬಣ್ಣ ಬಳಿಯುವುದರಿಂದಾನೂ ಬೆಳಕು ಹೆಚ್ಚು ಪ್ರತಿಫಲಿಸಿ ಭೂಮಿಯ ಶಾಖ ಕಡಿಮೆಯಾಗಬಲ್ಲದು.
ಎ.ಸಿ , ಫ಼್ರಿಜ್ ,ಹಾಗು ಕೀಟನಾಶಕಗಳ ಮೇಲೆ ಓಜ಼ೋನ್-ಮಿತ್ರ(OZONE FRIENDLY) ಲೋಗೋ ಇರುವುದನ್ನು ಖಚಿತಪಡಿಸಿ ಖರೀದಿಸಿ
ಪ್ರಶ್ನೆ :=ನಾವು ಭಾರತದವರು ಎಷ್ಟೋ ಪರವಾಯಿಲ್ಲ ಇಡೀ ಭಾರತ ದೇಶ ಒಂದು ತಿಂಗಳು ಬಳಸುವಷ್ಟು ಪೆಟ್ರೋಲಿಯಂ ಅನ್ನು ಕ್ಯಾಲಿಫ಼ೋರ್ನಿಯಾ ರಾಜ್ಯ-ಒಂದರಲ್ಲೇ ಎರಡು ದಿನದಲ್ಲಿ ಖಾಲಿ ಮಾಡುತ್ತಾರೆ
ಹೆಚ್ಚು ಅರಣ್ಯ ಹೊಂದಿರುವ ರಾಷ್ಟ್ರಗಳಲ್ಲಿ ಭಾರತ ಹತ್ತನೇ ಸ್ಥಾನದಲ್ಲಿದೆ ಅದೂ ಇಷ್ಟು ಜನಸಂಖ್ಯೆ ಇದ್ದೂ ಸಹ. ಆದರೆ ನೀರಿನ ಅವಶ್ಯಕತೆಯಲ್ಲಿ ನಾವೇ ನಂಬರ್-ವನ್ 

ಸೂರ್ಯ:=ಹೌದು ಮೊನ್ನೆ ಕೋಪನ್-ಹೇಗನ್ ಸಮಾವೇಶದಿಂದ "ಪ್ರಧಾನಿ" ತಿರಸ್ಕರಿಸಿ -ಎದ್ದು ಬಂದರಲ್ವಾ .ಆದರೆ ಎಲ್ಲ ದೇಶದವರೂ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಆಗ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತೆ
ನಿಮ್ಮ ಮಿತಿಯಲ್ಲಿ ಎನೇನು ಒಳ್ಳೆ ಕಾರಯ ಸಾಧ್ಯಾನೋ ಅದನ್ನೆಲ್ಲಾ ಸಾಧ್ಯವಾಗಿಸಿ ನಿಮ್ಮ ಭೂಮಿಯನ್ನು ಚನ್ನಾಗಿ ನೋಡಿಕೊಂಡರೆಭೂಮಿ ನಿಮ್ಮನು ನನ್ನ ಬಿಸಿಲಿನಿಂದ ಮಾತ್ರವಲ್ಲ ಎಲ್ಲಾ ಸಮಸ್ಯೆಗಳಿಂದಲೂ ರಕ್ಷಿಸುತ್ತಾಳೆ 
ಪ್ಲಾಸ್ಟಿಕ್ ಕಡಿಮೆ ಮಾಡಿ ,ಮಳೆನೀರು ಸಂಗ್ರಹಿಸಿ ಅಗ ಬಿಸಿಲಿನ ಝಳದ ಸಮಸ್ಯೆಗಳಿಂದ ಪಾರಾಗಬಹುದು

ಮಳೆಗಾಲದ ಬಿಸಿಲು-ಮಳೆಯಲ್ಲಿ ಕಾಮನ-ಬಿಲ್ಲಿನೊಂದಿಗೆ ಸಿಗೋಣ 

ಸರಿ ಮತ್ತೋಮ್ಮೆ ಸಿಗೋಣ ಬೈ
ನಾನೇನು ಸದಾ ಇಲ್ಲೇ ಇರುತ್ತೇನೆ ಹೀಗೆ ನನ್ನ ಪ್ರಪಂಚದ ಎಲ್ಲರಿಗೂ ಸದಾ ಕಾಣಿಸುತ್ತೇನೆ 

ಏಳೋ ಬೆಳಗಾಯ್ತು ,ಏಳೋ ಬೆಳಗಾಯ್ತು,
ಓ ಅಮ್ಮಾ  ಸೂರ್ಯ ಎಲ್ಲಿ?
ಅಮ್ಮ :=ಅಲ್ಲಿ ಪೂರ್ವದಲ್ಲಿ ಮೋಡಗಳ ಮರೆಯ ಮುಸುಕನ್ನು ಸರಿಸಿ ಬರುತ್ತಿದ್ದಾನೆ ,
ಗುಡ್ ಮಾರ್ನಿಂಗ್ 
ಈ ದಿನ ಬಿಸಿಲಿನ್ ಝಳ ಕಡಿಮೆ ಇರಲಿ ಎಂದು ಹಾರೈಸುತ್ತಿದ್ದೇನೆ?
ಈ ದಿನ ಪೂರ್ತಿ ಸಂತಸವಾಗಿರಲಿ

(ತಪ್ಪಿದ್ದರೆ ದಯವಿಟ್ಟು ತಿಳಿಸಿ-ಅದರೆ !!!ನನಗೆ!!! ಸೂರ್ಯನಿಗಲ್ಲ!!!!!!)

ಭಾನುವಾರ, ಜನವರಿ 17, 2010

ನಿಮ್ಮ ವಿಜ್ಞಾನ-ಬುದ್ದಿಗೋಂದು ಸವಾಲು

ಗ್ರಹಣ  ಮುಗಿದ ಎರಡು ದಿನದ ಮೇಲೆ ನನಗೊಂದು ಸವಾಲಾದ ಪ್ರಶ್ನೆ

ಸೂರ್ಯಗ್ರಹಣದ ಸಮಯವನ್ನು ತಿಳಿಯಲು  ನಮ್ಮ ಹಿರಿಯರು ,ಪ್ರಾಚೀನರು ಬಳಸುತ್ತಿದ್ದ ವಿಧಾನ

ಒಂದು ತಟ್ಟೆಯಲ್ಲಿ ನೀರು ತುಂಬಿ ಅದರ ನಡುವೆ "ಒನಕೆ"ಯನ್ನು ಲಂಬವಾಗಿ ನಿಲ್ಲಿಸಿದರೆ ಅದು ಗ್ರಹಣಹಿಡಿದಿರುವ ಸಮಯವನ್ನು ಬಿಟ್ಟು ಬೇರೆ ಯಾವಾಗಲೂ ಲಂಬವಾಗಿ ನಿಲ್ಲುವುದಿಲ್ಲವಂತೆ??????
ಅಷ್ಟು ಮಾತ್ರವಲ್ಲ ಗ್ರಹಣ ಮುಗಿದ ತತ್ ಕ್ಷಣವೇ ತಾನಾಗಿಯೇ ಬಿದ್ದು ಬಿಡುತ್ತದೆ ಅಂತೆ
ನಿನ್ನೆ ದಿನಪತ್ರಿಕೆಯಲ್ಲಿ ಓದಿದಾಗ(ಸಂಯುಕ್ತ ಕರ್ನಾಟಕ-೧೬ ಜನವರಿ ೨೦೧೦)ನೆನಪಿಗೆ ಬಂತು
ಗೂಗಲ್ ನಲ್ಲಿ ಬೇಕಾದರೆ ಕನ್ನಡ ಅಕ್ಷರಗಳಲ್ಲಿ"ಸೂರ್ಯಗ್ರಹಣ ಒನಕೆ" ಎಂದು ಟೈಪ್ ಮಾಡಿ ಸಿಗುತ್ತದೆ

ನಮ್ಮ ಹಿರಿಯರೂ ಇದೇ ವಿಧಾನದಿಂದ ಗ್ರಹಣದ ಸಮಯ ತಿಳಿಯಲು ಬಳಸುತ್ತಿದ್ದ ಬಗ್ಗೆ ಕೇಳಿದ್ದೇನೆ
ಆದರೆ ಸರಿಯಾಗಿ ಗೊತ್ತಿರಲಿಲ್ಲ 
ನನಗ್ಯಾಕೋ ಇದು ಮೂಢನಂಬಿಕೆ,ಮೌಢ್ಯ ಅನ್ನ್ನಿಸುತ್ತಿಲ್ಲ ಬದಲಾಗಿ ನಮ್ಮ ಹಿರಿಯರು ಎಷ್ಟು ಬುದ್ದಿವಂತರು ಅಲ್ವಾ ಎನ್ನಿಸಿತು
ಅದಕ್ಕೆ ವೈಜ್ಞಾನಿಕ ಕಾರಣ ಹೀಗಿರಬಹುದು

1)ನೀರಿನಲ್ಲಿ ಸೂರ್ಯ-ಚಂದ್ರರ  ಸ್ಥಾನ-ಚಲನೆಗನುಸಾರವಾಗಿ ಉಬ್ಬರ-ಇಳಿತಗಳಾಗುವುದು ನಮಗೆ ಗೊತ್ತೇ ಇದೆ ಆ ಉಬ್ಬರ-ಇಳಿತ ಕಾರಣವಿರಬಹುದು
ಬೊರಲು ಪಾದವಿರುವ ಒನಕೆ(ಒನಕೆಯ ಆಕಾರವನ್ನೋಮ್ಮೆ ಗಮನಿಸಿ)ಆ ಉಬ್ಬರ-ಇಳಿತದ ವೈತ್ಯಾಸದಿಂದ ಒನಕೆ ಬೀಳಬಹುದಲ್ಲವೇ

2)ಇಷ್ಟು ಮಾತ್ರವಲ್ಲ ಗ್ರಹಣಕಾಲದಲ್ಲಿ ಒನಕೆಯನ್ನು ಹಿಡಿದು ಎತ್ತಿದಾಗ ತಟ್ಟೆಯ ಸಮೇತ  ಮೇಲೆ ಬರುತ್ತದೆ ಅಂತೆ? ಗ್ರಹಣಕಾಲದಲ್ಲಿ ಗುರುತ್ವ ಹೆಚ್ಚಿರುತ್ತದೆ ಇರಬಹುದು. ತಟ್ಟೆ ಒನಕೆಗೆ ಹೇಗೆ ಅಂಟಿಕೋಡಿತೂ ಅಂತ ? Surface Tension ಕಾರಣವಿರಬಹುದೇ ನನಗ್ಯಾಕೋ ಇದು ಗಣಪತಿ ಹಾಲು ಕುಡಿದ ಪ್ರಸಂಗದಂತೆ ಅನ್ನಿಸುತ್ತಿಲ್ಲ ನೀವೇನಂತೀರಿ?

ಈ ವಿಧಾನವನ್ನು ನಮ್ಮ ಹಿರಿಯರು ಸಾವಿರಾರು ವರ್ಷಗಳಿಂದ ಬಳಸುತ್ತಿದ್ದಾರೆ(ನಾನೂರು ವರ್ಷದ ಹಿಂದೆ ಲಿಪ್ರೆ ಅಥವಾ ಗೇಲಿಲಿಯೊ ದೂರದರ್ಶಕ ಕಂಡು ಹಿಡಿಯೋ ಮುಂಚೆಯೇ ಈ ವಿಧಾನ ನಮ್ಮ ಹಳ್ಳಿ-ಹೈದರಿಗೆ ಗೊತ್ತಿತ್ತು)

ಈ ರೀತಿ ಎಷ್ಟು ಸಂಗತಿಗಳು ನಮ್ಮ ಅರಿವಿಗೆ ಬಾರದೆ ಮರ‍ೆತಿದ್ದೇವೋ ಗೊತ್ತಿಲ್ಲ
ಅದು ಇರಲಿ  ಇದನ್ನು ಕಂಡುಹಿಡಿದ ವಿಜ್ಞಾನಿ ಯಾರು ಇರಬಹುದು ಅವರಿಗೆ ಗುರುತ್ವ , ದ್ರವಗಳ ಸ್ವಭಾವ ಈ ಎಲ್ಲಾ ಸಂಗತಿಗಳ ಬಗ್ಗೆ ಹೇಗೆ ಗೊತ್ತಾಗಿದಿರಬಹುದು?, ಯಾವಾಗ ಪ್ರಯೋಗ ಮಾಡಿ ಕಂಡು ಹಿಡಿದಿರಬಹುದು(ಪ್ರಕೄತಿಯೇ ಅವರಿಗೆ ಲ್ಯಾಬ್)?

ಇನ್ನು ಎಷ್ಟು ಸಂಗತಿಗಳು ನಮ್ಮ ಹಿರಿಯರಿಗೆ ಗೊತ್ತಿದ್ದರೂ ನಾವೇ  ವಿಜ್ಞಾನದಲ್ಲಿ ಮುಂದುವರೆದಿದ್ದೇವೆ
ಅನ್ನುತ್ತೇವೆ ಆದರೂ ಗ್ರಹಣದ ದಿನ ಮನೆ ಬಿಟ್ಟು ಹೋರಬರದವರಿಗೆ ಏನನ್ನಬೇಕು
ಗ್ರಹಣದ ಬಗ್ಗೆ ಮಾಹಿತಿ ನೀಡದೆ ಶಾಲಾ-ಕಾಲೇಜುಗಳಿಗೆ ರಜೆ ಏಕೇ ಬೇಕು

 ನಮ್ಮ ಹಿರಿಯರು ನಿಜವಾದ ಜ್ಞಾನ ಉಳ್ಳವರಲ್ಲವೇ
ನನಗೆ ಒನಕೆ ಪ್ರಯೊಗವನ್ನು ಸ್ವತಃ ವೀಕ್ಷಿಸುವ ಅವಕಾಶ ಸಿಗಲಿಲ್ಲ 
ತಡವಾಗಿ ಇದರ ಬಗ್ಗೆ ತಿಳಿಯಿತು

ನಿಮಗೇನಾದರೂ ಗೋತ್ತಿದ್ದರೆ ನೀವೇನಾದ್ರು ನೋಡಿದ್ದರೆ ದಯವಿಟ್ಟು ತಿಳಿಸಿ
(ನಿಮ್ಮ ಬ್ಲಾಗ್ ನಲ್ಲಾಗಲಿ ಅಥವಾ ನನ್ನ ಬ್ಲಾಗ್ ಕಮೆಂಟ್ ಗಳಲ್ಲಾಗಲಿ ತಿಳಿಸಿ)
ಆದರೆ ಸಮುದ್ರ-ಸಾಗರ ಗಳಲ್ಲಿ ಏನೋ ಒಬ್ಬರ- ಇಳಿತ ಬರಬಹುದು ತಟ್ಟೆಯಲ್ಲಿನ ಅರ್ಧ ಲೀಟರ್ ಲೀರಿನಲ್ಲೂ ಉಬ್ಬರ-ಇಳಿತ ಬರುತ್ತದೆಯೇ ಬಂದರೂ ಅದು ವಸ್ತು ಒಂದನ್ನು ಬೀಳಿಸುವಷ್ಟು ಪ್ರಭಾವಶಾಲಿಯಾಗಿರುತ್ತದೆಯೇ? ಈ ರಹಸ್ಯಕ್ಕೆ ಉತ್ತರ ಸಿಗಲಿಲ್ಲ

ನಿಮ್ಮ ಹಿರಿಯರನ್ನೊ ಒಮ್ಮೆ ವಿಚಾರಿಸಿ-ಹೆಚ್ಚಿನ ಮಾಹಿತಿ ಪಡೆಯಿರಿ
ಬೇರೆ ಯಾವುದೇ ಕಾರಣಗಳು ನಿಮಗೆ ಗೊತ್ತಿದ್ದರೆ ನನ್ನ-ಬ್ಲಾಗ್ ದಯವಿಟ್ಟು ಸಂಪರ್ಕಿಸಿ

ಇದು ರೀಲ್ ಅಲ್ಲ ರಿಯಲ್ ಫ಼್ಯಾಕ್ಟ್ ,ರಿಯಲ್ ಮಿಸ್ಟರಿ?  ನಿಮ್ಮ ವಿಜ್ಞಾನ-ಬುದ್ದಿಗೋಂದು ಸವಾಲು
ಬನ್ನಿ ಮುಂದೆ ಓದಿ 

ಇವನ್ಯಾಕೆ ಗ್ರಹಣ ಮುಗಿದ ಎರಡು ದಿನದ ನಂತರ್ವೂ ತಲೆಕೇಡಿಸಿಕೋಂಡಿದ್ದಾನೆ ಅಂದುಕೋಳ್ಳಬೇಡಿ ಪ್ಲೀಸ್
ನಿಮ್ಮ ವಿಜ್ಞಾನ ಬುದ್ದಿಯನ್ನು ಚಲಾಯಿಸಿ
ನಾನು ಉತ್ತರ ಹುಡುಕಲು ಪ್ರಯತ್ನಿಸುತ್ತೇನೆ

ಏನೆ ಅನ್ನಿ  ಗ್ರಹಣ ನಿಮಿತ್ತ ನಮ್ಮ ರಾಜ್ಯದ ಹಲವು ಶಾಲಾ-ಕಾಲೇಜುಗಳಿಗೆ ರಜೆ ನೀಡಿರುವುದು ನಮ್ಮ ವೈಜ್ಞಾನಿಕ ಮನೋಭಾವದ ಕೋರತೆ ತೊರಿಸುತ್ತದೆ


ಕನ್ನಡದ ವಿಜ್ಞಾನ ಬ್ಲಾಗ್ ಗಳು ಏಕೋ ಅರ್ಧಕ್ಕೆ ನಿಂತಿರುವಂತೆ  ತೋರುತ್ತದೆ
"ಕಣಜ"ವೀಕೀಪೀಡಿಯಾ ಕೂಡ ವಿಷಯ ತುಂಬುವವರ ಕೋರತೆ ಎದುರಿಸುತ್ತಿದೆ

ದಯವಿಟ್ಟು ಕನ್ನಡದಲ್ಲಿ ವಿಜ್ಞಾನದ ವಿಷಯಗಳು ಬರುತ್ತಿರಲಿ 
(ನನ್ನ ಬ್ಲಾಗ್ ಬಗ್ಗೆ  ಕೇಳುವವರು ಇಲ್ಲದಿದ್ದರೂ ಮುಂದುವರ‍ೆಸುತ್ತಿದ್ದೇನೆ)
ವಂದನೆಗಳು

ಗ್ರಹಣ ,ದೇಶಾದ್ಯಂತ ಅಘೋಶಿತ ಕರ್ಫ್ಯೂ,ರಾಜ್ಯದ ಬಹುತೇಕ ಶಾಲಾ-ಕಾಲೇಜುಗಳಿಗೆ ರಜೆ

ನಿನ್ನೆ ತರಕಾರಿ ಕೋಳ್ಳಲು ನಮ್ಮಮ್ಮ ಪೇಟೆಗೇ ಹೋಗಿದ್ದರು
ತರಕಾರಿ ಮಾರುವಾಕೆ "ಕಡಿಮೆ ಬೆಲೆಗೆ ಕೋಡುತ್ತೇನೆ ನಾಳೆ ಏನಂದ್ರೂ ಗ್ರಹಣ ಜನರು ಮನೆ ಬಿಟ್ಟು ಬರುವುದಿಲ್ಲ ಅದಕ್ಕೆ ಅಂಗಡಿ ಮುಚ್ಚುತ್ತೇವೆ ಅಂದರಂತೆ"
ಏನು ಜನ ಮಾರಾಯ್ರೆ ಸ್ವಲ್ಪನೂ ವೈಜ್ಞಾನಿಕ-ಯೋಚನೆ ಬೇಡವಾ
ಗ್ರಹಣ ಬಂತು ಅಂದ್ರೆ ದೇಶಾದ್ಯಂತ ಅಘೋಶಿತ ಕರ್ಫ್ಯೂ ಸಾಮಾನ್ಯ
ಜನ ಮನೆ ಬಿಟ್ಟು ಹೋರ ಬರುವುದಿಲ್ಲ ಅನ್ನುತ್ತಾರೆ. ಇವರಿಗೇನೆನ್ನಬೇಕು?

ರಾಜ್ಯದ ಬಹುತೇಕ ಶಾಲಾ-ಕಾಲೇಜುಗಳಿಗೆ ರಜೆ ,ಗ್ರಹಣದ ಬಗ್ಗೆ ಒಂದು ಕನಿಷ್ಟ ಮಾಹಿತಿಯನ್ನೂ
ವಿಧ್ಯಾರ್ಥಿಗಳಿಗೆ ನೀಡದೆ ವಿಜ್ಞಾನ ಕಲಿಸಿದರೆ ಏನು ಉಪಯೋಗ ಅಂತ
ನಮ್ಮ ವಿಜ್ಞಾನ ಬುದ್ದಿ ಏನಂದರೂ ವಿದೇಶೀ-ಬಹುರಾಷ್ಟ್ರಿಯ ಕಂಪನಿಗಳ ಮುಷ್ಠಿಯಲ್ಲಿದೆ
ಕೆಟ್ಟ ಕೆಲಸ ಮಾಡಲು ತನ್ನೇಲ್ಲಾ ಬುದ್ದಿ ಉಪಯೋಗಿಸ್ತಾರೆ ಈ ಜನ

ಶಾಲಾ -ಕಾಲೇಜುಗಳಲ್ಲಿ ಕನಿಷ್ಟ ಗ್ರಹಣದ ಬಗ್ಗೆ ವಿಧ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸ ಆಗ ಬೇಕಿತ್ತು ಕೆಲವರಿಗದರೂ ಅದರ ಬಗ್ಗೆ ಅರಿವಿದೆಯಲ್ಲ ಅಂತ ಸಂತಸಪಡೋಣ

ಶನಿವಾರ, ಜನವರಿ 16, 2010

ರಾಹು ಕೇತು ಹಾಗು ಗ್ರಹಣ

ಹೌದಲ್ವೇ? ಹಿಂದೂ ಪಂಚಾಂಗದಲ್ಲಿ ಸೂರ್ಯನಿಗೆ ರಾಹು ಅಥವಾ ಕೇತು ಹಿಡಿದಾಗ ಸೂರ್ಯಗ್ರಹಣವಾಗುತ್ತದೆ ಅನ್ನುತ್ತಾರಲ್ಲಾ ಹಾಗಾದರೆ ರಾಹು-ಕೇತು ಗಳು ಯಾರು?  
ನಿಮಗೆಲ್ಲಾ ಸೂರ್ಯ ಚಂದ್ರ ಹಾಗು ಭೂಮಿ ಒಂದೇ ರೇಖೆಯಲ್ಲಿ ಬಂದಾಗ ಗ್ರಹಣವಾಗುತ್ತದೆ ಎಂದು ಗೊತ್ತಿದೆ  ಅದ್ರೆ ಚನ್ನಾಗಿ ನೆನಪಿರಲಿ,  ಸೂರ್ಯ ಚಂದ್ರ ಹಾಗು ಭೂಮಿ ಒಂದೇ ಸಮತಲದಲ್ಲೂ ಬಂದಾಗ ಮಾತ್ರ ಗ್ರಹಣವಾಗುತ್ತದೆ ಇಲ್ಲವೆಂದರೆ ಪ್ರತೀ ಅಮವಾಸ್ಯೆಯೂ ಸಹ ಸೂರ್ಯಗ್ರಹಣವಾಗಬೇಕಿತ್ತು
ಪ್ರತೀ ಹುಣ್ಣಿಮೆಯೂ ಸಹ ಚಂದ್ರಗ್ರಹಣವಾಗಬೇಕಿತ್ತು ಆದರೆ ಹಾಗಾಗುವುದಿಲ್ಲ ಏಕೆಂದರೆ ಭೂಮಿ-ಸೂರ್ಯನನ್ನು ಹಾಗು ಚಂದ್ರ-ಭೂಮಿಯನ್ನು ಬೇರೇ ಸಮತಲಗಳಲ್ಲಿ ಸುತ್ತುತ್ತವೆ

ಕೆಲವೊಮ್ಮೆ ಮಾತ್ರ ಆ ಎರಡು ಸಮತಲಗಳು ಸಂಧಿಸುವ ಬಿಂದುಗಳಲ್ಲಿ ಸೂರ್ಯ ಅಥವಾ ಚಂದ್ರ ಬಂದಾಗ ಗ್ರಹಣವಾಗುತ್ತದೆ 

ಸ್ವಲ್ಪಕಾಲ ಭೂಮಿಯ ಸುತ್ತ ಸೂರ್ಯನೂ ಸುತ್ತುತ್ತಾನೆ ಎಂದು ಭಾವಿಸಿ, ಚಂದ್ರನೂ ಮಾಸಕ್ಕೆ ಒಮ್ಮೆ ಸುತ್ತುತ್ತಾನೆ ಅವರಿಬ್ಬರು ಸುತ್ತುವ  ಸಮತಲಗಳು ಸಂಧಿಸುವ ಬಿಂದುಗಳೇ ರಾಹು ಹಾಗು ಕೇತು
(ಭಾರತೀಯ ಹಿಂದೂ ಖಗೋಳವಿಜ್ಞಾನದಲ್ಲಿ  ಭೂಕೇಂದ್ರವಾದವನ್ನು ಸರಿ ಎಂದೇನು ಹೇಳಿಲ್ಲ ಪಂಚಾಗದ ಅನುಕೂಲಕ್ಕಾಗಿ ಮಾತ್ರ ಹಾಗೆ ಬಿಂಬಿಸಲಾಗಿದೆ ಅದು ಬೇರೆಯೇ ವಿಷಯ)

ಶುಕ್ರವಾರ, ಜನವರಿ 15, 2010

ಈ ಬಾರಿಯ ಗ್ರಹಣದ ಚಿತ್ರಗಳಿವು

ಈ ಬಾರಿಯ ಗ್ರಹಣದ ಚಿತ್ರಗಳಿವು(15 January 2010)
( ಶಿವಮೋಗ್ಗದಲ್ಲಿ )
ನೋಡಿ ನಿಮ್ಮ ಅಭಿಪ್ರಾಯ ಕಮೆಂಟ್ ಗಳಲ್ಲಿ ತಿಳಿಸಲು ಮರೆಯದಿರಿ







ಕಂಕಣ ಸೂರ್ಯಗ್ರಹಣ ವೀಕ್ಷಿಸಲು ಸದ್ಯ ಮಳೆರಾಯನೇನೂ ಅಡ್ಡಿಬರಲಿಲ್ಲ